Connect with us

Crime

ಬಾಯ್‍ಫ್ರೆಂಡ್ ಬೇರೆ ಮದುವೆ ಆಗಿದ್ದಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

Published

on

ಡಿಸ್ಪುರ್: 34 ವರ್ಷದ ಯುವತಿಯೊಬ್ಬಳು ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಅಸ್ಸಾಂನ ಕ್ಯಾಚರ್ ಜಿಲ್ಲೆಯ ಸಿಲ್ಚಾರ್ ನಗರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಯುವತಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಬಾಯ್ ಫ್ರೆಂಡ್ ನನ್ನನ್ನು ಈ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿರುವುದಾಗಿ ಬರೆದಿದ್ದಾಳೆ.

ಮೃತ ಯುವತಿಯನ್ನು ಲಿಪಿ ಡ್ಯಾಮ್ ಕನುಂಗೋ ಎಮದು ಗುರುತಿಸಲಾಗಿದೆ. ಈಲೆ ಸಿಲ್ಚಾರ್ ನಲ್ಲಿ ಮೋಟಾರ್ ಕಾರ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಪಂಚಾಯತ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬಳೇ ವಾಸವಾಗಿದ್ದಳು. ಆದರೆ ಗುರುವಾರ 7.30ರ ಸುಮಾರಿಗೆ ನೆರೆಮನೆಯವರು ನೋಡಿದಾಗ ಆಕೆ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇತ್ತ ಸ್ಥಳೀಯ ನಿವಾಸಿಗಳು ಡೆತ್ ನೋಟ್ ಇರುವ ಬಗ್ಗೆಯೂ ಪೊಲೀಸರಿಗೆ ತಿಳಿಸಿದ್ದಾರೆ. ಅದರಲ್ಲಿ ತನ್ನ ಬಾಯ್‍ಫ್ರೆಂಡ್ ಧ್ರುಬಜೋತಿ ನಾಥ್ ತನಗೆ ಮೋಸ ಮಾಡಿರುವುದಾಗಿ ಯುವತಿ ಉಲ್ಲೇಖಿಸಿದ್ದಾಳೆ. ಅಲ್ಲದೆ ನಾಥ್ ತನ್ನನ್ನು ಬಿಟ್ಟು ಇನ್ನೊಬ್ಬಳನ್ನು ಮದುವೆಯಾಗಿದ್ದಾನೆ ಎಂದು ದೂರಿದ್ದಾಳೆ.

ಸದ್ಯ ಘಟನೆ ಸಂಬಂಧ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ. ಈ ಪ್ರಕರಣಕ್ಕೆ ಶೀಘ್ರವೇ ನ್ಯಾಯ ಒದಗಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *