Advertisements

ಮದುವೆ ಮನೆಯಲ್ಲಿ ಗುಂಡಿನ ದಾಳಿ – ಮಹಿಳೆಗೆ ಗಾಯ

ನವದೆಹಲಿ: ಮದುವೆ ಸಮಾರಂಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ 54 ವರ್ಷದ ಮಹಿಳೆಯೊಬ್ಬರಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ದೆಹಲಿಯ ಛತ್ತರ್‍ಪುರ ಪ್ರದೇಶದಲ್ಲಿ ನಡೆದಿದೆ.

Advertisements

ಘಟನೆಯಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ವಸಂತ್ ಕುಂಜ್‍ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಸಂಬಂಧ ಹೇಳಿಕೆ ಪಡೆಯಲು ಮಹಿಳೆ ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಘಟನೆ ವಿಚಾರವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

Advertisements

ಛತ್ತರ್‍ಪುರ ದೇವಾಲಯದ ಮಾತಂಗಿ ಭವನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಹರಿಯಾಣದ ಬಹದ್ದೂರ್‍ಗಢದಿಂದ ಮದುವೆ ಸಮಾರಂಭಕ್ಕೆ ಬಂದಿದ್ದವರ ಗುಂಪಿನಲ್ಲಿ ಮಹಿಳೆ ಕೂಡ ಒಬ್ಬರಾಗಿದ್ದಾರೆ ಎಂದು ಪೊಲೀಸ್ ಉಪ ಕಮಿಷನರ್ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್

ಇದೀಗ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisements
Advertisements
Exit mobile version