Friday, 17th August 2018

Recent News

ದೇವಾಲಯಕ್ಕೆ ತೆರಳುತ್ತಿದ್ದ ಮಹಿಳೆಯನ್ನ ಅಪಹರಿಸಿ ಗ್ಯಾಂಗ್ ರೇಪ್

ಮಂಡ್ಯ: ದೇವಾಲಯಕ್ಕೆ ತೆರಳುತ್ತಿದ್ದ ಗೃಹಿಣಿಯನ್ನು ಕಾರಿನಲ್ಲಿ ಅಪಹರಿಸಿ ಮೂವರು ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೂನ್ 4ರಂದು ಘಟನೆ ನಡೆದಿದ್ದು, ಬುಧವಾರ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಂಜಯ್, ಬಿಡ್ಡಾ ಮತ್ತು ರಮೇಶ್ ಅತ್ಯಾಚಾರ ಪ್ರಕರಣದ ಆರೋಪಿಗಳು. ಎಲ್ಲ ಆರೋಪಿಗಳು ಹಾಗು ಸಂತ್ರಸ್ತ ಮಹಿಳೆ ಒಂದೇ ಗ್ರಾಮದವರಾಗಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜೂನ್ 4ರಂದು ಮಹಿಳೆ ಕರಿಘಟ್ಟ ದೇವಾಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಮಹಿಳೆಯನ್ನು ಅಡ್ಡಗಟ್ಟಿದ ಕಾಮುಕರು ಅಪಹರಿಸಿ, ಗೌತಮಕ್ಷೇತ್ರದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ್ದಾರೆ. ಅತ್ಯಾಚಾರದ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಇನ್ನೊಮ್ಮೆ ಕರೆದಾಗ ನೀನಾಗಿಯೇ ಬರಬೇಕು, ಇಲ್ಲವಾದ್ರೆ ವಿಡಿಯೋ ತೋರಿಸಿ ಮಾನ ಹರಾಜು ಹಾಕಲಾಗುವುದು. ಒಂದು ವೇಳೆ ವಿಷಯವನ್ನು ಯಾರಿಗಾದ್ರೂ ತಿಳಿಸಿದ್ರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತೆ ಬುಧವಾರ ರಾತ್ರಿ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮೂವರು ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *