Crime
ಮನೆಗೆ ತೆರಳಿ ಗೆಳೆಯನ ರೂಮಿನಲ್ಲೇ ಯುವತಿ ನೇಣಿಗೆ ಶರಣು!

– ಏಕಾಏಕಿ ಮನೆಗೆ ತೆರಳಿ ಸೂಸೈಡ್
– ಶಾಲಿನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ
– ಗೆಳೆಯ ಹೇಳಿದ್ದೇನು..?
ತಿರುವನಂತಪುರಂ: ಗೆಳೆಯನ ಮನೆಗೆ ತೆರಳಿ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ಕೇರಳದ ಎರ್ನಾಕುಲಂ ನಲ್ಲಿ ನಡೆದಿದೆ.
ಮೃತಳನ್ನು ಸೂರ್ಯ(26) ಎಂದು ಗುರುತಿಸಲಾಗಿದೆ. ಈಕೆ ಅಂಬಾಲ್ಲೂರು ನಿವಾಸಿಯಾಗಿದ್ದು, ಗೆಳೆಯ ಅಶೋಕ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಮನೆಗೆ ಬಂದ ಸೂರ್ಯ ಕೋಣೆಯ ಬಾಗಿಲನ್ನು ಏಕಾಏಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗೆಳೆಯ ಅಶೋಕ್ ಹಾಗೂ ಆತನ ಪೋಷಕರು ತಿಳಿಸಿದ್ದಾರೆ.
ಬೆಳಗ್ಗೆ 10.30ರ ಸುಮಾರಿಗೆ ಸೂರ್ಯ ಅಶೋಕ್ ಮನೆಗೆ ತೆರಳಿದ್ದಾಳೆ. ಹೀಗೆ ಹೋದಾಕೆ ನೇರವಾಗಿ ಮೊದಲ ಮಹಡಿಯಲ್ಲಿರುವ ಅಶೋಕ್ ರೂಮಿಗೆ ಹೋಗಿದ್ದಾಳೆ. ಇತ್ತ ಅಶೋಕ್ ಪೋಷಕರು, ಮತ್ತೊಬ್ಬ ಮಹಿಳೆ ಹಾಗೂ ಇಬ್ಬರು ಪೈಂಟ್ ಮಾಡುವವರು ಮನೆಯೊಳಗಡೆ ಅವರವರ ಕೆಲಸ ಮಾಡುತ್ತಿದ್ದರು. ನಾವು ಮನೆಯಿಂದ ಹೊರ ಬಂದು ಕೋಣೆಯಲ್ಲಿ ನೋಡಿದಾಗ ಸೂರ್ಯ ಅದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಅಶೋಕ್ ಹೆತ್ತವರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ ಸಂದರ್ಭದಲ್ಲಿ ಸೂರ್ಯ ಮೃತದೇಹ ಬೆಡ್ ನಲ್ಲಿ ಬಿದ್ದಿತ್ತು. ಆತ್ಮಹಹತ್ಯೆಗೆ ಆಕೆ ಧರಿಸಿದ್ದ ಶಾಲು ಬಳಕೆ ಮಾಡಿಕೊಂಡಿದ್ದಳು. ಅಲ್ಲದೆ ಫ್ಯಾನ್ ಗೆ ಕಟ್ಟಿ ನೇಣಿಗೆ ಶರಣಾಗಿದ್ದಾಳೆ. ಸೂರ್ಯ ಮೃತಪಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿಲ್ಲ ಎಂದು ಪೋಷಕರು ಹೇಳಿದ್ದಾರೆ. ಮುಲಾಂತುರುತಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಪಿಎಸ್ಸಿ ತರಬೇತಿ ಕೇಂದ್ರದಲ್ಲಿ ಸೂರ್ಯ ಹಾಗೂ ಅಶೋಕ್ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಹೀಗಾಗಿ 4 ವರ್ಷಗಳಿಂದ ಅಶೋಕ್ ಗೆ ಸೂರ್ಯ ಪರಿಚಯವಿತ್ತು. ಇದೀಗ ಅಶೋಕ್ ಗೆ ಬೇರೆ ಯುವತಿಯೊಂದಿಗೆ ಡಿಸೆಂಬರ್ 15ರಂದು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ಕಾರಣದಿಂದಾಗಿ ಸೂರ್ಯ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
