ಬೈಕ್‍ನಲ್ಲಿ ಕುಳಿತು ಇನ್ನೊಂದು ಬೈಕ್ ಸವಾರನಿಗೆ ಒದ್ದು ಬಿದ್ದ ಹುಡುಗಿ

Advertisements

ಬೈಕ್‍ನಲ್ಲಿ (Bike) ಸವಾರಿ ಮಾಡುತ್ತಿರುವಾಗ ನಾಯಿಗಳು (Dog) ಅಡ್ಡ ಬಂದಾಗ ಒದ್ದು ಸಾಗುವ ಬೈಕ್ ರೈಡರ್‌ಗಳ ಬಗ್ಗೆ ನೀವು ಕೇಳಿರಬಹುದು. ಇಲ್ಲೊಬ್ಬಳು ಹುಡುಗಿ ಬೈಕ್ ಸವಾರಿ ಮಾಡುತ್ತಿದ್ದಾಗ ಇನ್ನೊಂದು ಬೈಕ್ ಸವಾರನಿಗೆ ಒದ್ದು ತಾನೇ ಬೈಕ್‍ನಿಂದ ಬಿದ್ದು ಪೇಚಿಗೆ ಸಿಲುಕಿಕೊಂಡಿದ್ದಾಳೆ.

Advertisements

ಬೈಕ್ ರೈಡರ್‌ಗಳು ರಸ್ತೆಯಲ್ಲಿ ಹೋಗುತ್ತಿದ್ದಾಗ ಪ್ರಾಣಿಗಳು (Animals) ಅಡ್ಡ ಬಂದರೆ ಒದ್ದು ಸಾಗುವ ಸಾಕಷ್ಟು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮಧ್ಯೆ ಇಲ್ಲೊಬ್ಬಳು ಹುಡುಗಿಯ ವೀಡಿಯೋ ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

Advertisements

 

ವೀಡಿಯೋದಲ್ಲಿ ಬೈಕ್‍ನಲ್ಲಿ ಹಿಂಬಂದಿ ಸವಾರೆಯಾಗಿ ಹುಡುಗಿ ಹೋಗುತ್ತಿರುತ್ತಾಳೆ ಈ ವೇಳೆ ಮುಂಬದಿಯಲ್ಲಿ ಬೈಕ್ ಸವಾರನೊಬ್ಬ ಹೋಗುತ್ತಿರುವುದನ್ನು ಗಮನಿಸಿ ಹುಡುಗಿ ತಾನಿದ್ದ ಬೈಕ್‍ನಲ್ಲಿ ಕೂತಲ್ಲಿಂದ ಮುಂದೆ ಹೋಗುತ್ತಿದ್ದ ಬೈಕ್ ಸವಾರನಿಗೆ ಒದೆಯುತ್ತಾಳೆ. ಒದ್ದ ವೇಗಕ್ಕೆ ಹುಡುಗಿ ತಾನಿದ್ದ ಬೈಕ್‍ನಿಂದ ಕೆಳಕ್ಕೆ ಬೀಳುತ್ತಾಳೆ. ಈ ವೀಡಿಯೋ ಹರಿಬಿಟ್ಟಿರುವ ನೆಟ್ಟಿಗರು ಮಾಡಿದ ಕರ್ಮಕ್ಕೆ ಸರಿಯಾಗಿ ಶಿಕ್ಷೆ ಅನುಭವಿಸಿದ್ದಾಳೆ ಎಂದು ಬರೆದುಕೊಂಡು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಾಪಿ ಹೊಡೆದು ಮೋಹಿನ್ ಆತ್ಮಹತ್ಯೆ – ಟೀಚರ್ ವಿರುದ್ಧ ಪ್ರಕರಣ ದಾಖಲು

Advertisements

ಮೂಕ ಪ್ರಾಣಿಗಳಿಗೆ ಬೈಕ್ ಸವಾರರು ಒದ್ದು ಮುಂದೆ ಸಾಗಿದರೆ, ಕಾರು, ಲಾರಿ, ಬಸ್ ಸೇರಿದಂತೆ ಘನ ವಾಹನಗಳು ಪ್ರಾಣಿಗಳ ಮೇಲೆ ಸಂಚರಿಸುವ ಮೂಲಕ ವಿಕೃತಿ ಮೆರೆದ ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ. ಇಂತಹ ಕೃತ್ಯ ಎಸೆಯಬೇಡಿ ಮೂಖ ಪ್ರಾಣಿಗಳ ಸಾವಿಗೆ ಕಾರಣರಾದರೆ ಕರ್ಮದ ಫಲ ನಿಮ್ಮನ್ನು ಈ ರೀತಿ ಕಾಡಬಹುದೆಂದು ಇನ್ನೊಬ್ಬ ಕಾಮೆಂಟ್ ಹಾಕಿದ್ದಾನೆ.

Live Tv

Advertisements
Exit mobile version