ಹೈದರಾಬಾದ್: ಬೈಕ್ ಚಕ್ರಕ್ಕೆ ಬುರ್ಖಾ ಸಿಲುಕಿ, ಬಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಮುಖ್ಯವಾಗಿ ಮಹಿಳೆಯರು ಬುರ್ಖಾ ಅಥವಾ ಉದ್ದನೆಯ ಬಟ್ಟೆಗಳನ್ನು ಧರಿಸಿ ಜಾಗರೂಕರಾಗಿ ಇರಬೇಕೆಂದು ಜನರು ಎಚ್ಚರಿಕೆ ನೀಡುತ್ತಿದ್ದಾರೆ.
ಬುರ್ಖಾ ಬೈಕ್ ಚಕ್ರಕ್ಕೆ ಸಿಲುಕಿ ಯುವತಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ ಯಾಚರಂನಲ್ಲಿ ನಡೆದಿದೆ. ಭಾನುವಾರ ನಡೆದ ಘಟನೆಯಲ್ಲಿ ಯುವತಿಗೆ ಗಂಭೀರ ಗಾಯಗಳಾಗಿದ್ದು, ಮರುದಿನ ಸಾವನ್ನಪ್ಪಿದ್ದಳು. ಅಪಘಾತದಲ್ಲಿ ಆಕೆಯ ಸಹೋದರನಿಗೆ ಯಾವುದೇ ಗಾಯಗಳಾಗದೇ ಪಾರಾಗಿದ್ದಾನೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್ ರೇಪ್ – 7 ಮಂದಿಗೆ ಜೀವಾವಧಿ ಶಿಕ್ಷೆ
ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇಂತಹ ದುರಂತಗಳನ್ನು ತಪ್ಪಿಸಲು ಮಹಿಳೆಯರಿಗೆ ದ್ವಿಚಕ್ರವಾಹನದಲ್ಲಿ ಜಾಗರೂಕರಾಗಿ ಪ್ರಯಾಣಿಸುವಂತೆ ಎಚ್ಚರಿಕೆ ನೀಡಿಲಾಗುತ್ತಿದೆ. ಇದನ್ನೂ ಓದಿ: ಕಾರಿನೊಂದಿಗೆ ಕೊಚ್ಚಿ ಹೋಗುತ್ತಿದ್ದ ನಾಲ್ವರು ಅದೃಷ್ಟವಶಾತ್ ಬಚಾವ್