Tuesday, 18th June 2019

ಪಕ್ಷದಲ್ಲಿನ ಆಂತರಿಕ ವಿಚಾರ ಬಹಿರಂಗಪಡಿಸಿದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ

ಶ್ರೀನಗರ: ಬಿಜೆಪಿಯಲ್ಲಿ ಹಿರಿಯ ನಾಯಕರಿಂದ ಮಹಿಳಾ ಕಾರ್ಯಕರ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ಜಮ್ಮು ಮಹಿಳಾ ಮೋರ್ಚಾ ಸದಸ್ಯೆ ಪ್ರಿಯಾ ಜರಲ ಗಂಭೀರ ಆರೋಪ ಮಾಡಿದ್ದಾರೆ. ಹಿರಿಯರ ಸಮ್ಮುಖದಲ್ಲಿಯೇ ಪ್ರಿಯಾ ಜರಲ್ ಆರೋಪಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ನಾವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಟೀಕಿಸುತ್ತೇವೆ. ಮಷೀನ್ ನಲ್ಲಿ ಈ ಕಡೆಯಿಂದ ಆಲೂಗಡ್ಡೆ ಹಾಕಿದ್ರೆ ಮತ್ತೊಂದು ಕಡೆ ಬಂಗಾರ ತೆಗೆಯಲಾಗುತ್ತದೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಾರೆ. ಆದ್ರೆ ನಮ್ಮ ಪಕ್ಷದಲ್ಲಿ ಹೋಟೆಲ್ ಒಳಗಡೆ ಹೋದ ಸಾಮಾನ್ಯ ಕಾರ್ಯಕರ್ತೆಯೊಬ್ಬಳು, ಹೊರಗಡೆ ಬರುವಾಗ ಬಿಜೆಪಿಯ ದೊಡ್ಡ ನಾಯಕಿಯಾಗಿ ಹೊರಹೊಮ್ಮುತ್ತಾಳೆ ಎಂದು ಹೇಳುವ ಮೂಲಕ ಪಕ್ಷದಲ್ಲಿಯ ಆಂತರಿಕ ವಿಚಾರವನ್ನು ಪ್ರಿಯಾ ಜರಲ್ ಬಹಿರಂಗಗೊಳಿಸಿದ್ದಾರೆ.

ಬಿಜೆಪಿ ಸಭೆಯಲ್ಲಿ ಪ್ರಿಯಾ ಜರಲ್ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ಸದಸ್ಯೆಯರು ಪ್ರಿಯಾರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ಹಿರಿಯ ನಾಯಕರು ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಿಯಾರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.

ಸಭೆಯಿಂದ ಹೊರ ಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾ ಜರಲ್, ನಾವು ರಾಹುಲ್ ಗಾಂಧಿಯವರ ಎಲ್ಲ ಹೇಳಿಕೆಗಳನ್ನು ಟೀಕಿಸುತ್ತೇವೆ. ಆದ್ರೆ ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಹೋಟೆಲ್ ಒಳ ಹೋಗಿದ್ದ ಸಾಮನ್ಯ ಕಾರ್ಯಕರ್ತೆ, ಹೊರ ಬಂದ ಮೇಲೆ ಆಕೆ ದೊಡ್ಡ ನಾಯಕಿಯಾಗಿ ಬರುತ್ತಾಳೆ. ಯಾರು ಈ ಕೆಲಸಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವರನ್ನು ಎಲ್ಲ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ. ಕೆಲ ಮಹಿಳೆಯರು ನನ್ನ ಹೇಳಿಕೆ ಸುಳ್ಳು ಎಂದು ವಾದಿಸಬಹುದು. ಅವರು ಎಂಥವರು ಎಂಬುವುದೇ ನಿಮಗೆ ಗೊತ್ತಾಗಲಿದೆ. ಪಕ್ಷದಲ್ಲಿ ಹಿರಿಯ ನಾಯಕರಿಂದ ತುಳಿತಕ್ಕೊಳಗಾದ ನಿಜವಾದ ಕಾರ್ಯಕರ್ತರು ನನ್ನನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.

ಪಕ್ಷದ ಹಿರಿಯ ನಾಯಕರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದ ಪ್ರಿಯಾ ಜರಲ್ ಅವರನ್ನು ಮಹಿಳಾ ಮೋರ್ಚಾದ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *