Connect with us

Crime

ಮದ್ವೆ ಆಗಲು ನಿರಾಕರಿಸಿದಕ್ಕೆ ಯುವತಿ ಆತ್ಮಹತ್ಯೆಗೆ ಯತ್ನ

Published

on

ಹೈದರಾಬಾದ್: ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದ ಮುಕ್ತರೋಪೇಟಾದಲ್ಲಿ ನಡೆದಿದೆ.

ಅನುಷಾ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಅನುಷಾ ಜಗ್ತಯಲ್ಲಿನ ಜ್ಯೋತ್ಸ್ನಾ ಆಸ್ಪತ್ರೆಯಲ್ಲಿ ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದಳು. ಈ ವೇಳೆ ಅವಳಿಗೆ ಕಿರಣ್‍ನ ಪರಿಚಯ ಆಗಿದೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಒಬ್ಬರನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಇದರ ನಡುವೆ ಅನುಷಾ ಜ್ಯೋತ್ಸ್ನಾ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಕರೀಂನಗರದಲ್ಲಿರುವ ಅಪೆಕ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಶುರು ಮಾಡಿದ್ದರು. ಕರೀಂನಗರಕ್ಕೆ ಬಂದ ನಂತರವೂ ಅನುಷಾ, ಕಿರಣ್‍ನನ್ನು ಮೂರು ವರ್ಷ ಪ್ರೀತಿಸಿದ್ದಳು.

ಅನುಷಾ, ಕಿರಣ್ ಜೊತೆ ಕಾಲ ಕಳೆಯುತ್ತಿದ್ದಾಗ ಮದುವೆ ಬಗ್ಗೆ ಮಾತನಾಡಿದ್ದಾಳೆ. ಅದಕ್ಕೆ ಕಿರಣ್ ನಮ್ಮಿಬ್ಬರ ಜಾತಿ ಬೇರೆ ನಾನು ನಿನ್ನನ್ನು ಮದುವೆ ಆಗಲ್ಲ ಎಂದು ಆಕೆಯನ್ನು ನಿರಾಕರಿಸಿದ್ದಾನೆ. ಕಿರಣ್ ತನ್ನನ್ನು ನಿರಾಕರಿಸಿದಕ್ಕೆ ಅನುಷಾ ಮಾನಸಿಕವಾಗಿ ನೊಂದಿದ್ದಳು. ಬಳಿಕ ಅನುಷಾ ಭಾನುವಾರ ರಾತ್ರಿ ಮುಕ್ತರೋಪೇಟಾಕ್ಕೆ ಬಂದು ಡೆತ್‍ನೋಟ್ ಬರೆದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅನುಷಾ ಪೋಷಕರು ಆಕೆಯನ್ನು ಅಪೆಕ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಡೆತ್‍ನೋಟ್‍ನಲ್ಲಿ ಏನಿದೆ?
ಅನುಷಾ ತನ್ನ ಡೆತ್‍ನೋಟ್‍ನಲ್ಲಿ ಪೋಷಕರ ಬಳಿ ಕ್ಷಮೆ ಕೇಳಿದ್ದಾಳೆ. ಅಲ್ಲದೇ ತನ್ನ ಅಕ್ಕ-ಬಾವನಿಗೆ ತಂದೆ ತಾಯಿಯನ್ನು ನೋಡಿಕೊಳ್ಳಲು ಒತ್ತಾಯಿಸಿದ್ದಾಳೆ. ನನ್ನ ಸಾವಿಗೆ ಕಿರಣ್ ಕುಟುಂಬದವರೇ ಕಾರಣ. ಕಿರಣ್ ನನ್ನನ್ನು ಮದುವೆ ಆಗಲು ನಿರಾಕರಿಸಿದ್ದಾನೆ. ಆತನ ಕುಟುಂಬದವರು ನನ್ನ ಕುಟುಂಬದವರಿಗೆ ಕಿರುಕುಳ ನೀಡುವುದಾಗಿ ಬೆದರಿಸಿದ್ದಾರೆ. ಕಿರಣ್ ಕಿರುಕುಳ ಸಹಿಸಲಾಗದೇ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಬರೆದಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv