ರಾಂಚಿ: ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡಿರುವ ಯುವತಿ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ.
ಕುಟುಂಬಸ್ಥರು ಬಲಂತವಾಗಿ ಯುವತಿಯ ಮದುವೆ ಮಾಡಿದ್ದಾರೆ. ಆದರೆ ಆಕೆ ಮರುದಿನವೇ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿದ್ದಾಳೆ. ಈ ಜೋಡಿ ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಗುದ್ದಿದ ಕಾರ್- ಐದು ಮಂದಿ ಸ್ಥಳದಲ್ಲೇ ಸಾವು
ಯುವತಿ ವಿವಾಹ ಮಾಡಿಕೊಳ್ಳುವುದಕ್ಕೂ ಮುಂಚಿತವಾಗಿ ಸಲಿಂಗ ಸಂಗಾತಿ ಜೊತೆ ವಾಸವಾಗಿದ್ದಳು. ಇದನ್ನರಿತ ಕುಟುಂಬಸ್ಥರು ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಈ ಬೆನ್ನಲ್ಲೇ ಆಕೆ ಮದುವೆಯಾದ ಮರುದಿನವೇ ಸಲಿಂಗ ಸಂಗಾತಿ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಇಬ್ಬರೂ ಕಳೆದ ಅನೇಕ ವರ್ಷಗಳಿಂದ ಪರಿಚಯವಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದರಂತೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಯುವತಿ ಗಂಡನೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ, ಸಲಿಂಗ ಸಂಗಾತಿ ಜೊತೆ ಇರುವುದಾಗಿ ಹೇಳಿದ್ದಾಳೆ.