Tuesday, 22nd October 2019

ವಿಧಾನಸಭೆಯಲ್ಲಿ ಸಚಿವ ಡಿಕೆಶಿ – ಕೈ ಶಾಸಕ ನಾಗ್ರೇಂದ್ರ ನಡ್ವೆ ‘ಚೀಟಿ’ ಚರ್ಚೆ

ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕ ನಾಗೇಂದ್ರ ನಡುವೆ ‘ಚೀಟಿ’ ಯ ಬಗ್ಗೆ ಚರ್ಚೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು. ಆದರೆ ಇತ್ತ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಜೇಬಿನಲ್ಲಿದ್ದ ಚೀಟಿಯನ್ನು ತೆಗೆದು ಶಾಸಕ ನಾಗೇಂದ್ರ ಅವರಿಗೆ ತೋರಿಸಿದ್ದು, ಅದರಲ್ಲಿ ಬರದಿದ್ದ ಲೈನ್ ತೋರಿಸಿ ನಾಗೇಂದ್ರ ಅವರಲ್ಲಿ ಶಿವಕುಮಾರ್ ಚರ್ಚೆ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಮತ್ತು ನಾಗೇಂದ್ರ ಅವರ ನಡುವೆ ನಡೆದ ಚೀಟಿಯಲ್ಲಿ ಏನಿತ್ತು? ಯಾವುದರ ಬಗ್ಗೆ ಇತ್ತು ಎಂಬುದು ತಿಳಿದಿಲ್ಲ. ಆದರೆ ತುಂಬಾ ಸಮಯದವರೆಗೂ ಅದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಅಲ್ಲದೆ ಆ ಚೀಟಿಯಲ್ಲಿರುವ ಅಂಶಗಳ ಬಗ್ಗೆ ನಾಗೇಂದ್ರ ಅವರಿಗೆ ಡಿ.ಕೆ. ಶಿವಕುಮಾರ್ ಅರ್ಥಮಾಡಿಸಿದ್ದಾರೆ.

ಸದ್ಯಕ್ಕೆ ಎಲ್ಲರಿಗೂ ನಾಗೇಂದ್ರಗೆ ಸಚಿವ ಡಿ.ಕೆ. ಶಿವಕುಮಾರ್ ತೋರಿಸಿದ ಚೀಟಿ ವಿಚಾರ ಕುತೂಹಲ ಮೂಡಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *