Recent News

ರಾಜ್ಯ ರಾಜಕಾರಣದಲ್ಲಿ ಮತ್ತೆ ಪ್ರಬಲವಾಯ್ತಾ ಸಿದ್ದರಾಮಯ್ಯ ಹಿಡಿತ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯ ಹಿಡಿತ ಪ್ರಬಲವಾಯಿತಾ ಅನ್ನೋ ಅನುಮಾನವೊಂದು ಮೂಡುತ್ತಿದೆ. ಯಾಕಂದರೆ ಒಂದೆಡೆ ಹೈ ಕಮಾಂಡ್, ಮತ್ತೊಂದು ಕಡೆ ದೋಸ್ತಿ ನಾಯಕರು, ಇನ್ನೊಂದೆಡೆ ತಮ್ಮದೇ ಪಕ್ಷದ ಪರಮೇಶ್ವರ್, ಡಿಕೆಶಿ ಹಾಗೂ ಖರ್ಗೆ. ಹೀಗೆ ಮೂರು ಮೂರು ಕಡೆಗೆ ನಾನೇ ಪವರ್ ಫುಲ್ ಅನ್ನೋ ಸಂದೇಶ ರವಾನಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಹೌದು. ನಿನ್ನೆವರೆಗೂ ಸರ್ಕಾರದ ಪಾಲಿಗೆ ಆಪತ್ಬಾಂಧವರು ಯಾರು ಹಾಗೂ ಶಾಸಕರನ್ನ ಕರೆ ತಂದು ಸರ್ಕಾರ ಉಳಿಸುವವರು ಯಾರು ಅನ್ನೋ ಪ್ರೆಶ್ನೆ ಎಲ್ಲರನ್ನು ಕಾಡುತ್ತಿತ್ತು. ಆದರೆ ಇಂದಿಗೂ ಸರ್ಕಾರ ಉಳಿಯಬೇಕಾದರೆ ಸಿದ್ದರಾಮಯ್ಯ ಅವರೇ ಅನಿವಾರ್ಯ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

ಶನಿವಾರ ಎಂಟಿಬಿ ನಾಗರಾಜ್ ರನ್ನ ಮನವೊಲಿಸಿದ ಸಿದ್ದರಾಮಯ್ಯ ಇದೀಗ ಶಾಸಕ ಸುಧಾಕರ್ ಮನವೊಲಿಕೆಗೂ ಅವರೇ ಅನಿವಾರ್ಯ ಎನ್ನುವಂತಾಗಿದೆ. ಅಲ್ಲದೆ ಬೆಂಗಳೂರಿನಿಂದ ಬಂಡಾಯದ ಬಾವುಟ ಹಾರಿಸಿಕೊಂಡು ಹೊರಟ ಕಾಂಗ್ರೆಸ್ ನ ಮೂವರು ಹಾಗೂ ಜೆಡಿಎಸ್ ನ ಓರ್ವ ಶಾಸಕನಿಗೂ ಸಿದ್ದರಾಮಯ್ಯ ಅವರೇ ಬಾಸ್ ಎಂದು ಹೇಳಲಾಗುತ್ತಿದೆ. ಆದ್ದರಿಂದ ಕೊನೆ ಪಕ್ಷ ಆ ನಾಲ್ಕು ಶಾಸಕರು ವಾಪಸ್ ಬರುವಂತೆ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗ್ತಾರಾ ಅನ್ನೋ ಕುತೂಹಲ ಇದೆ.

ಎಂಟಿಬಿ ಆಪರೇಷನ್ ಸಕ್ಸಸ್ ಮೂಲಕ ಹೈ ಕಮಾಂಡ್ ಗೆ ಕೂಡ ಸಿದ್ದರಾಮಯ್ಯ ಈಗಲೂ ಪವರ್ ಫುಲ್ ಎಂಬ ಮೆಸೇಜ್ ಪಾಸಾಗಿದೆ. ಇತ್ತ ಟ್ರಬಲ್ ಶೂಟರ್ ಡಿಕೆಶಿ ಹಾಗೂ ಪರಮೇಶ್ವರ್ ಯತ್ನಕ್ಕಿಂತ ಸಿದ್ದರಾಮಯ್ಯರ ಮಾತೆ ಪವರ್ ಫುಲ್ ಅನ್ನೋ ಸಂದೇಶ ಕೂಡ ರವಾನೆಯಾಗಿದೆ. ದೋಸ್ತಿ ನಾಯಕರಿಗೂ ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸಹಕಾರ ಬೇಕೆ ಬೇಕು ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ಇಡೀ ಬೆಳವಣಿಗೆ ಸಿದ್ದರಾಮಯ್ಯರನ್ನ ರಾಜ್ಯ ರಾಜಕಾರಣದ ಮುನ್ನಲೆಗೆ ತಂದು ನಿಲ್ಲಿಸಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ರಾಜಕಾರಣದಲ್ಲಿ ಪವರ್ ಫುಲ್ ಅನ್ನೋದು ಮತ್ತೆ ಸಾಬೀತಾಗಿದೆ.

Leave a Reply

Your email address will not be published. Required fields are marked *