Connect with us

Latest

ಚಂದ್ರನ ಮೇಲೆ ನನ್ನದು ಸೇಫ್ ಲ್ಯಾಂಡಿಂಗ್- ಚಿದಂಬರಂ

Published

on

ನವದೆಹಲಿ: ಚಂದ್ರನ ಮೇಲೆ ನನ್ನದು ಸೇಫ್ ಲ್ಯಾಂಡಿಂಗ್ ಅಗಲಿದೆ ಎಂಬ ವಿಚಾರ ಕೇಳಿ ರೋಮಾಂಚಿತನಾಗಿದ್ದೇನೆ ಎಂದು ಚಿದಂಬರಂ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ಸಿಬಿಐ ವಿರುದ್ಧ ಗುಡುಗಿದ್ದಾರೆ.

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಆಕ್ಟೋಬರ್ 3ರವರೆಗೆ ನ್ಯಾಯಾಂಗ ಬಂಧನದಲ್ಲಿ ರಿಸಲಾಗಿದೆ. ಸೆಪ್ಟೆಂಬರ್ 23ರಂದು ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಸಿಬಿಐ ಜಾಮೀನು ನೀಡದಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದೆ. ಸದ್ಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಚಿದಂಬರಂ ಅವರ ಟ್ವಿಟ್ಟರ್ ಖಾತೆಯನ್ನು ಕುಟುಂಬಸ್ಥರು ನಿರ್ವಹಣೆ ಮಾಡುತ್ತಿದ್ದಾರೆ. ಚಿದಂಬರ ಪರವಾಗಿ ಟ್ವೀಟ್ ಮಾಡುವ ಮೂಲಕ ಸಿಬಿಐ ಆಡಳಿತ ವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಚಿದಂಬರಂ ಟ್ವೀಟ್:
ನನ್ನ ಬದಲಾಗಿ ಕುಟುಂಬಸ್ಥರಿಗೆ ಕೆಲವು ಸಾಲುಗಳನ್ನು ಬರೆಯುವಂತೆ ಹೇಳಿದೆ. ಕೆಲವರ ಪ್ರಕಾರ ನನಗೆ ಚಿನ್ನದ ರೆಕ್ಕೆಗಳು ಬರಲಿವೆ. ಈ ರೆಕ್ಕೆಗಳಿಂದ ನಾನು ಚಂದ್ರನ ಮೇಲೆ ಹೋಗಲಿದ್ದೇನೆ. ಅಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ. ಈ ವಿಷಯ ಕೇಳಿ ನಾನು ರೋಮಾಂಚಿತನಾಗಿದ್ದೇನೆ ಎಂದು ಬರೆಯಲಾಗಿದೆ.

ಬಂಧನಕ್ಕೊಳಗಾಗಿರುವ ಚಿದಂಬರಂ ಜಾಮೀನು ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ಪರ ವಕೀಲರು, ಚಿದಂಬರಂ ಓರ್ವ ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದಾರೆ. ಸಿಬಿಐ ವಾದದ ಹಿನ್ನೆಲೆಯಲ್ಲಿ ಚಿದಂಬರಂ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.