Connect with us

Chamarajanagar

ಸಫಾರಿ ವಾಹನವನ್ನ ಅಟ್ಟಾಡಿಸಿದ ಒಂಟಿ ಸಲಗ – ವಿಡಿಯೋ ನೋಡಿ

Published

on

ಚಾಮರಾಜನಗರ: ಸಫಾರಿ ವಾಹನವನ್ನ ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದಂತಹ ಘಟನೆ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಭಾನುವಾರ ಈ ಘಟನೆ ನಡೆದಿದ್ದು, ರಜೆ ಇದ್ದ ಕಾರಣ ಬಂಡೀಪುರದಲ್ಲಿ ಸಫಾರಿಗೆಂದು ಪ್ರವಾಸಿಗರು ಹೋಗಿದ್ದರು. ಬಳಿಕ ವಾಹನದಲ್ಲಿಯೇ ಕುಳಿತು ಉದ್ಯಾನವನವನ್ನು ವೀಕ್ಷಿಸುತ್ತಿದ್ದರು. ಇತ್ತ ಉದ್ಯಾನವನದಲ್ಲಿದ್ದ ಒಂಟಿ ಸಲಗ ಸಫಾರಿ ವಾಹನವನ್ನು ನೋಡಿದ ತಕ್ಷಣ ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಬಂದಿದೆ.

ಅಟ್ಟಾಡಿಸಿಕೊಂಡು ಬರುತ್ತಿದ್ದ ಒಂಟಿ ಸಲಗವನ್ನು ನೋಡಿ ಸಫಾರಿ ವಾಹನ ಚಾಲಕ ತಕ್ಷಣ ವಾಹನವನ್ನು ಓಡಿಸಿದ್ದಾನೆ. ಆದರೆ ಮೊದಲು ಆನೆ ನಿಧಾನವಾಗಿ ವಾಹನವನ್ನು ಓಡಿಸಿಕೊಂಡು ಬಂದಿದೆ. ಅದರಂತೆಯೇ ಸಫಾರಿ ವಾಹನ ಕೂಡ ನಿಧಾನವಾಗಿ ಹೋಗುತ್ತಿತ್ತು. ಬಳಿಕ ಏಕಾಏಕಿ ಒಂಟಿ ಸಲಗ ವೇಗವಾಗಿ ವಾಹನವನ್ನು ಅಟ್ಟಾಡಿಸಿಕೊಂಡು ಬರಲು ಶುರುಮಾಡಿದೆ. ಕಾಡಾನೆ ಅಟ್ಟಾಡಿಸಿಕೊಂಡು ಬಂದ ತಕ್ಷಣ ಎಚ್ಚೆತ್ತು ಡ್ರೈವರ್ ವಾಹನವನ್ನು ಬೇಗನೇ ಓಡಿಸಿದ್ದಾನೆ. ಕೊನೆ ಒಂಟಿ ಸಲಗ ಹಿಂದಿರುಗಿದೆ.

ಸಫಾರಿ ವಾಹನವನ್ನು ಸುಮಾರು 30 ಸೆಕೆಂಡ್‍ಗಳ ಸಮಯ ಅಟ್ಟಾಡಿಸಿಕೊಂಡು ಬಂದಿದೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಫಾರಿ ವಾಹನದಲ್ಲಿಯೇ ಕುಳಿತಿದ್ದ ಪ್ರವಾಸಿಗರೊಬ್ಬರು ಒಂಟಿ ಸಲಗ ಅಟ್ಟಾಡಿಸಿಕೊಂಡು ಬಂದ ತಕ್ಷಣವನ್ನು ತಮ್ಮ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ಸಫಾರಿ ವಾಹನದಲ್ಲಿ ಸುಮಾರು 6-7 ಮಂದಿ ಪ್ರವಾಸಿಗರು ಇದ್ದರು. ಸದ್ಯಕ್ಕೆ ಡ್ರೈವರ್ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.

https://www.youtube.com/watch?v=zMKE0yzVg3o

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv