Friday, 22nd November 2019

Recent News

ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿದ ಆನೆ

ಚಾಮರಾಜನಗರ: ತನ್ನ ಮರಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಕೋಪಗೊಂಡು ಆನೆಯೊಂದು ಪ್ರವಾಸಿಗರ ವಾಹನದ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತನ್ನ ಮರಿ ಆನೆಯೊಂದಿಗೆ ಎರಡು ಆನೆಗಳು ಕೆರೆಯಲ್ಲಿ ನೀರು ಕುಡಿದು ಸ್ವಸ್ಥಾನಕ್ಕೆ ಹಿಂದಿರುಗುತ್ತಿದ್ದವು. ಬಳಿಕ ರಸ್ತೆ ದಾಟುತ್ತಿದ್ದ ವೇಳೆ ತವೇರಾ ವಾಹನದಲ್ಲಿ ಅರಣ್ಯದೊಳಗೆ ಬಂದಂತಹ ಪ್ರವಾಸಿಗರು ಆನೆಗಳ ಫೋಟೋ ತೆಗೆಯಲು ವಾಹನವನ್ನು ನಿಲುಗಡೆ ಮಾಡಿದರು ಎನ್ನಲಾಗಿದೆ.

ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಿರುವುದನ್ನು ನೋಡಿ ಕೋಪಗೊಂಡ ಆನೆಗಳು ತನ್ನ ಮರಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ತಿಳಿಯಿತು. ಬಳಿಕ ಪ್ರವಾಸಿಗರ ವಾಹನವನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.

ಈ ದೃಶ್ಯ ಸಫಾರಿ ತೆರಳಿದ್ದ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *