Connect with us

Crime

11 ಬಾರಿ ಇರಿದು, ಪತಿಯ ಕತ್ತು ಸೀಳಿದ ಪತ್ನಿ

Published

on

ಮುಂಬೈ: ಪರ ಸ್ತ್ರೀಯೊಂದಿಗೆ ಸಂಬಂಧ ಬೆಳೆಸಿದ್ದ ಪತಿಯನ್ನು ಪತ್ನಿ 11 ಬಾರಿ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಂದಿದ್ದಾಳೆ. ಮೊದಲು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಪತ್ನಿ ನಂತರ ತಪ್ಪೊಪ್ಪಿಕೊಂಡಿದ್ದಾಳೆ.

ಮುಂಬೈನ ನಲಸೋಪರದ ಗಾಲಾ ನಗರದಲ್ಲಿ ಈ ಘಟನೆ ನಡೆದಿದೆ. ಸುನೀಲ್ ಕದಮ್(36) ಮೃತ ದುರ್ದೈವಿ, ಆತನ ಪತ್ನಿ ಪ್ರಣಾಲಿ(33) ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಸುನೀಲ್ ತಂದೆ-ತಾಯಿ, ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಾಗಿದ್ದನು. ಬುಧವಾರ ಪತಿ-ಪತ್ನಿ ಮಧ್ಯೆ ಗಲಾಟೆ ನಡೆದಿತ್ತು, ಈ ವೇಳೆ ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪತ್ನಿ ಅಡುಗೆ ಮನೆಯಿಂದ ಚಾಕು ತಂದು ಪತಿ ಮೇಲೆ 11 ಬಾರಿ ದಾಳಿ ನಡೆಸಿದ್ದಾಳೆ. ನಂತರ ಪತಿ ಕತ್ತು ಸೀಳಿದ್ದಾಳೆ.

ಕೊಲೆ ಮಾಡಿದ ಬಳಿಕ ಲಿವಿಂಗ್ ರೂಮಿನಲ್ಲಿ ಮಲಗಿದ್ದ ಅತ್ತೆ-ಮಾವನಿಗೆ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಸತ್ಯಾಂಶ ತಿಳಿಯದ ಅತ್ತೆ- ಮಾವ ಪಾಪ ಸೊಸೆಯ ಮಾತನ್ನೇ ನಂಬಿದ್ದಾರೆ.

ವ್ಯಕ್ತಿ ತನ್ನ ಹೊಟ್ಟೆಗೆ, ಕತ್ತಿಗೆ ತಾನಾಗಿಯೇ ಈ ರೀತಿ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಅನುಮಾನ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಅನುಮಾನ ಮೂಡಿದೆ. ಈ ಹಿನ್ನೆಲೆ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ.

ಆರೋಪಿ ಹಾಗೂ ಸುನೀಲ್ ಪ್ರೀತಿಸಿ, 2011ರಲ್ಲಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಸುನೀಲ್ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಆರೋಪಿಗೆ ತಿಳಿದಿದೆ. ಈ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ಆದ್ದರಿಂದ ಮೋಸ ಮಾಡಿದ ಪತಿ ಕೊಲೆ ಮಾಡಿದ್ದೇನೆ ಎಂದು ಪತ್ನಿ ಹೇಳಿದ್ದಾಳೆ.