Crime
ಪತ್ನಿ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದ ಯುವಕನನ್ನ ಕೊಂದ!

– ಇನಿಯನ ಜೊತೆ ಸರಸದಾಟದಲ್ಲಿ ತೊಡಗಿದ್ದ ಪತ್ನಿ
– ಎರಡು ಮಕ್ಕಳ ತಾಯಿ ಜೊತೆ 24ರ ಯುವಕನ ರಂಗಿನಾಟ
ಲಕ್ನೋ: ಪತ್ನಿ ಜೊತೆ ಸರಸದಲ್ಲಿ ತೊಡಗಿದ್ದ ಯುವಕನನ್ನ ಬ್ಯಾಟ್ ನಿಂದ ಹೊಡೆದು ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ಯುವಕ ವಿವಾಹಿತೆ ಪ್ರೇಯಸಿಯನ್ನ ಭೇಟಿಯಾಗಲು ನೋಯ್ಡಾದಿಂದ ಅಲಿಗಢಕ್ಕೆ ಬಂದಿದ್ದನು.
25 ವರ್ಷದ ವಿಕಾಸ್ ರಾಜನ್ ಕೊಲೆಯಾದ ಯುವಕ. ನೋಯ್ಡಾದ ಅಕಲ್ಪುರ ನಗರದ ರಘುಪುರ ನಿವಾಸಿಯಾಗಿದ್ದ ವಿಕಾಸ್ ಗೆ ನಾಲ್ಕು ವರ್ಷಗಳ ಹಿಂದೆ ಎರಡು ಮಕ್ಕಳ ತಾಯಿ ಕಮಲೇಶ ಉರ್ಫ್ ಕಮಲಾ ಪರಿಚಯಗೊಂಡಿದ್ದಳು. ಇಬ್ಬರ ಗೆಳೆಯನ ಅನೈತಿಕ ಸಂಬಂಧವಾಗಿ ಬದಲಾಗಿತ್ತು. ಕಮಲಾ ಪತಿ ಮನೆಯಲ್ಲಿ ಇಲ್ಲದ ವೇಳೆ ವಿಕಾಸ್ ಬಂದು ಹೋಗುತ್ತಿದ್ದನು.
ಭಾನುವಾರ ಕಮಲಾ ಪತಿ ಸುಂದರ್ ಲಾಲ್ ಹಿಮಾಚಲ ಪ್ರದೇಶದ ಬಿಸ್ಕಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಭಾನುವಾರ ರಜೆ ಪಡೆದು ಸುಂದರ್ ಲಾಲ್ ಮನೆಗೆ ಬಂದಾಗ ಬಾಗಿಲು ತೆರೆದಿತ್ತು. ಮಕ್ಕಳಿಬ್ಬರು ಮನೆಯಲ್ಲಿರಲಿಲ್ಲ. ಒಳಗೆ ಪತ್ನಿ ಕಮಲಾ ಯುವಕನ ಜೊತೆ ಹಾಸಿಗೆ ಹಂಚಿಕೊಂಡಿರೋದನ್ನ ಸುಂದರ್ಲಾಲ್ ನೋಡಿದ್ದಾನೆ.
ಸುಂದರ್ ಲಾಲ್ ಬಂದಿದ್ದನು ನೋಡಿದ ವಿಕಾಸ್ ಮನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೋಪಗೊಂಡಿದ್ದ ಸುಂದರ್ ಲಾಲ್ ಮನೆಯಲ್ಲಿದ್ದ ಬ್ಯಾಟ್ ನಿಂದ ಪತ್ನಿಯ ಇನಿಯನನ್ನು ಥಳಿಸಿ ಕೊಂದಿದ್ದಾನೆ. ಅಪ್ಪನ ಧ್ವನಿ ಕೇಳಿ ಹಿರಿಯ ಮಗ ಬಂದಿದ್ದಾನೆ. ತಂದೆ ಯುವಕನನ್ನ ಥಳಿಸುತ್ತಿರೋದನ್ನ ಕಂಡು ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಲೆಗೆ ಬಲವಾದ ಏಟು ಬಿದ್ದ ಹಿನ್ನೆಲೆ ವಿಕಾಸ್ ಪೊಲೀಸರು ಬರೋವಷ್ಟರಲ್ಲಿ ಕೊನೆಯುಸಿರು ಎಳೆದಿದ್ದನು.
