Tuesday, 10th December 2019

ಸೆಕ್ಸ್ ಗೆ ನಿರಾಕರಿಸಿದ ಪತ್ನಿಯನ್ನ ಕೊಂದು, ಮರ್ಮಾಂಗವನ್ನ ಕತ್ತರಿಸಿಕೊಂಡ ಪತಿ

ಲಕ್ನೋ: ಬೆಳಗಿನ ಜಾವ ಸೆಕ್ಸ್ ಮಾಡಲು ನಿರಾಕರಿಸಿದ್ದ ಪತ್ನಿಯನ್ನು ಕೊಂದು, ಕೊನೆಗೆ ಪತಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

ಅನವಾರೂಲ್ ಹಸನ್ ಪತ್ನಿ ಮೆಹನಾಜ್‍ಳನ್ನು ಕೊಂದ ಪತಿ. ಶನಿವಾರ ಬೆಳಗಿನ ಜಾವ ಘಟನೆ ನಡೆದಿದ್ದು, ಮರ್ಮಾಂಗ ಕತ್ತರಿಸಿಕೊಂಡಿರುವ ಪತಿ ಬಾಬಾ ರಾಘವದಾಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಆರೋಪಿ ಹಸನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಹಸನ್ ಸಿದ್ಧಾರ್ಥನಗರ ಜಿಲ್ಲೆಯ ಪಥರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪೋಖರಾ ಗ್ರಾಮದ ನಿವಾಸಿ. ಹಸನ್ ಗುಜರಾತಿನ ಸೂರತ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ವರ್ಷವೇ ಈತನ ಮದುವೆ ಆಗಿತ್ತು. ಎರಡು ದಿನಗಳ ಹಿಂದೆ ಮನೆಗೆ ಬಂದಿದ್ದನು. ಕೊಲೆ ನಡೆದ ವೇಳೆ ಮನೆಯಲ್ಲಿ ಹಸನ್ ಮತ್ತು ಮೆಹನಾಜ್ ಮಾತ್ರ ಇದ್ದರು ಎಂದು ವರದಿ ಆಗಿದೆ.

ಹಸನ್ ಮನೆಯಿಂದ ಕಿರುಚಾಟ ಕೇಳಿಯ ನೆರೆಹೊರೆಯವರು ಬಂದಿದ್ದಾರೆ. ನೆಲದ ಮೇಲೆ ಮೆಹನಾಜ್ ಶವ ಕಂಡಿದ್ದು, ಹಸನ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದನು. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ಹಸನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಕಿತ್ಸೆ ಬಳಿಕ ಸಂಬಂಧಿಕರೊಂದಿಗೆ ಮಾತನಾಡಿರುವ ಹಸನ್, ನಾನು ಸೆಕ್ಸ್ ಗೆ ಕರೆದಾಗ ಪತ್ನಿ ವಿರೋಧ ವ್ಯಕ್ತಪಡಿಸಿದಳು. ಈ ವೇಳೆ ಕೋಪದಲ್ಲಿ ಆಕೆಯನ್ನು ಕೊಂದು, ನನ್ನ ಮರ್ಮಾಂಗವನ್ನು ಕತ್ತರಿಸಿಕೊಂಡೆ ಎಂದು ಹೇಳಿದ್ದಾನೆ.

ಆರೋಪಿ ಹಸನ್ ವರದಕ್ಷಿಣೆ ತರುವಂತೆ ಮಹೆನಾಜ್ ಗೆ ಕಿರುಕುಳ ನೀಡುತ್ತಿದ್ದನು. ವರದಕ್ಷಿಣೆಗಾಗಿಯೇ ಹಸನ್ ಪತ್ನಿಯನ್ನು ಕೊಂದಿದ್ದಾನೆ ಎಂದು ಮೆಹನಾಜ್ ಪೋಷಕರು ಆರೋಪಿಸಿದ್ದಾರೆಂದು ಸಿದ್ಧಾರ್ಥನಗರ ಎಸ್ ಪಿ ಧರಂವೀರ್ ಸಿಂಗ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *