Crime
ಪತ್ನಿ, ಮಗುವಿಗೆ ಗುಂಡಿಟ್ಟು, ಆತ್ಮಹತ್ಯೆಗೆ ಶರಣಾದ

– ಇಬ್ಬರನ್ನ ಕೊಂದ ಬಳಿಕ ವೀಡಿಯೋ
ಚಂಡೀಗಢ: ಪತ್ನಿ ಮತ್ತು ನಾಲ್ಕು ವರ್ಷದ ಮಗುವಿಗೆ ಗುಂಡಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಂಜಾಬ್ ರಾಜ್ಯದ ಅಮೃತಸರದ ಬಹದ್ದೂರ್ ನಗರದಲ್ಲಿ ನಡೆದಿದೆ.
ವಿಕ್ರಮ್ಜಿತ್ ಪತ್ನಿ ಹಾಗೂ ಮಗುವನ್ನ ಕೊಂದು ಸೂಸೈಡ್ ಮಾಡಿಕೊಂಡ ವ್ಯಕ್ತಿ, ಮೃತ ವಿಕ್ರಮಜಿತ್ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ವಿಕ್ರಮ್ಜಿತ್ ಒಂದಿಷ್ಟು ಹಣವನ್ನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿದೆ.
ಪತ್ನಿ ಮತ್ತು ಮಗುವನ್ನ ಕೊಂದ ಬಳಿಕ ವೀಡಿಯೋ ಮಾಡಿರುವ ವಿಕ್ರಮ್ಜಿತ್, ಗೆಳೆ ಯನಿಗೆ ಸುಳ್ಳು ಹೇಳಿ ಆತನಿಂದ ತಂದ ಗನ್ ನಿಂದ ಪತ್ನಿ ಹಾಗೂ ಮಗುವನ್ನ ಕೊಂದಿದ್ದೇನೆ. ಹಾಗಾಗಿ ನನ್ನ ಗೆಳೆಯನಿಗೆ ಕಷ್ಟ ಕೊಡಬೇಡಿ ಎಂದು ತಾವು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ಶವಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
