Thursday, 21st March 2019

Recent News

ರಾಜಕಾರಣಿಗಳಿಗೆ ಸಿಗೋ ಸೇನಾ ಹೆಲಿಕಾಪ್ಟರ್ ವೀರಯೋಧರಿಗೆ ಏಕಿಲ್ಲ..?

– ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಬೆಂಗಳೂರು: ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಹುತಾತ್ಮನ ಕುಟುಂಬಕ್ಕೆ ಮಧ್ಯಪ್ರದೇಶದಲ್ಲಿ 1 ಕೋಟಿ ಪರಿಹಾರ ನೀಡಿದ್ದಾರೆ. ಅಲ್ಲದೇ ತತ್‍ಕ್ಷಣವೇ ಹುತಾತ್ಮರ ಪತ್ನಿಗೆ ಸರ್ಕಾರಿ ಉದ್ಯೊಗದ ಆದೇಶ ಪತ್ರವನ್ನೂ ಕೊಟ್ಟಿದ್ದಾರೆ. ಆದ್ರೆ, ರಾಜ್ಯದ ಯೋಧನಿಗೆ ಕೋಟಿ ಪರಿಹಾರವೂ ಇಲ್ಲ. ಹೆಲಿಕಾಪ್ಟರ್ ವ್ಯವಸ್ಥೆಯೂ ಸಿಗಲಿಲ್ಲ.

ಹೌದು. ಯೋಧ ಗುರು ಕುಟುಂಬಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ 25 ಲಕ್ಷ ರೂಪಾಯಿ ಕೊಟ್ಟು ಸುಮ್ಮನಾಗಿದ್ದಾರೆ. ಮಧ್ಯಪ್ರದೇಶ ಸಿಎಂ ಕೈಲಿ ಆಗಿದ್ದು, ನಮ್ಮ ಸಿಎಂಗೆ ಯಾಕೆ ಆಗಲಿಲ್ಲ. ಅಲ್ಲದೇ ರಾಜಕಾರಣಿಗಳಿಗೆ ಸಿಗುವ ಸೇನಾ ಹೆಲಿಕಾಪ್ಟರ್ ವೀರಮರಣವಪ್ಪಿದ ಯೋಧರಿಗೆ ಏಕೆ ಇಲ್ಲ ಎಂಬ ಚರ್ಚೆಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ.

ಪನ್ನೀರ್ ಸೆಲ್ವಮ್ ಸಹೋದರನನ್ನ ಆಸ್ಪತ್ರೆಗೆ ಸೇರಿಸಲು ಸೇನಾ ಹೆಲಿಕಾಪ್ಟರ್ ಸಿಗುತ್ತದೆ. ಆದ್ರೆ ಯೋಧ ಗುರುವಿನ ಪಾರ್ಥಿವ ಶರೀರ ಕೊಂಡೊಯ್ಯಲು ಸೇನೆಯ ಹೆಲಿಕಾಪ್ಟರ್ ಸಿಗೋದಿಲ್ಲ. ಇದಕ್ಕೆ ಜವಬ್ದಾರರಾಗ್ತೀರಾ ಎಂದು ರಕ್ಷಣಾ ಸಚಿವರನ್ನು ಜನ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿಯತ್ತಿಗಾದ್ರೂ ಒಂದೊಳ್ಳೆ ಕೆಲಸ ಬೇಡ್ವಾ..? ನಿಮ್ಮದೇ ಇಲಾಖೆಯ ಯೋಧನ ಪಾರ್ಥಿವ ಶರೀರ ಕೊಂಡೊಯ್ಯಲು ಹೆಲಿಕಾಪ್ಟರ್ ಯಾಕೆ ಕೊಡಲಿಲ್ಲ. ಸಿಎಂ ಫೋನ್ ಮಾಡಿ ಸೇನಾ ಹೆಲಿಕಾಪ್ಟರ್ ಒದಗಿಸುವಂತೆ ಕೇಳಿದ್ರೂ ಯಾಕೆ ನೀಡಲಿಲ್ಲ ಎಂದು ಸಚಿವರ ಮೇಲೆ ಹರಿಹಾಯ್ದಿದ್ದಾರೆ.

ನಟ ಅಂಬರೀಶ್ ಮೃತದೇಹ ಸಾಗಿಸಲು ಇದ್ದ ಉತ್ಸಾಹವನ್ನು ಈಗ ಯಾಕೆ ಕಳೆದುಕೊಂಡ್ರಿ. ಅಂಬರೀಶ್ ಮೃತದೇಹ ಸಾಗಿಸಲು ಕ್ಷಣಾರ್ಧದಲ್ಲಿ ರಕ್ಷಣಾ ಹೆಲಿಕಾಪ್ಟರ್ ಅರೇಂಜ್ ಮಾಡಿಸಿದ್ರಿ. ಆದ್ರೆ ಗುರು ಪಾರ್ಥಿವ ಶರೀರ ಸಾಗಿಸಲು ಸೇನಾ ಹೆಲಿಕಾಪ್ಟರ್ ಏಕಿಲ್ಲ. ಬರೀ ಫೋನ್ ಮಾಡ್ಬಿಟ್ರೆ ಸಾಕಾ, ಯಾಕೆ ಒತ್ತಡ ಹಾಕಿಲ್ಲ. ನೀವೇನೊ ಒಂದೇ ಗಂಟೆಯಲ್ಲಿ ಹೆಲಿಕಾಪ್ಟರ್ ಹಿಡಿದು ಸ್ಥಳಕ್ಕೆ ಹೋಗಿ ಬಿಡುತ್ತೀರಿ. ನಿಮಗೆ ಗಂಟೆಯಲ್ಲಿ ಸಿಗೋ ಹೆಲಿಕಾಪ್ಟರ್ ದೇಶ ಕಾಯೋ ಯೋಧ ಗುರುಗೆ ಯಾಕೆ ಇಲ್ಲ. ಮೃತದೇಹ ನೋಡಲು ಹೆತ್ತವರು, ಬಂಧು ಬಳಗ ದಿನವೆಲ್ಲಾ ಅಳುತ್ತಾ ಕಾಯಬೇಕಾ. ಒಂದು ವೇಳೆ ನೀವು ಹೆಲಿಕಾಪ್ಟರ್ ವ್ಯವಸ್ಥೆ ಮಾಡುತ್ತಿದ್ದರೆ ಆರು ಗಂಟೆಗಳ ರಸ್ತೆ ಪ್ರಯಾಣದ ಬದಲು ಕೇವಲ 45 ನಿಮಿಷಗಳಲ್ಲಿ ಹುಟ್ಟೂರಿಗೆ ಪಾರ್ಥಿವ ಶರೀರ ಕೊಂಡೊಯ್ಯಬಹುದಿತ್ತು ಎಂದು ಜನ ಸಿಎಂ ಕುಮಾರಸ್ವಾಮಿ ವಿರುದ್ಧವೂ ಕಿಡಿಕಾರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *