Connect with us

Bengaluru City

ಸುಧಾಕರ್, ಅಶೋಕ್ ಮಧ್ಯೆ ಕೊರೊನಾ ಫೈಟ್?

Published

on

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹಾವಳಿ ಮಧ್ಯೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ತಲೆನೋವು ಶುರುವಾಗಿದೆ. ಇಂದಿನಿಂದ ಬೆಂಗಳೂರು ಕೊರೊನಾ ನಿರ್ವಹಣೆ ಪಾತ್ರ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆ ಎದ್ದಿದೆ.

ಸಚಿವ ಡಾ.ಕೆ.ಸುಧಾಕರ್ ಕ್ವಾರಂಟೈನ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಶೋಕ್‍ಗೆ ಸಿಕ್ಕಿತ್ತು. ಮುಖ್ಯಮಂತ್ರಿಗಳು ಆರ್ ಅಶೋಕ್‍ಗೆ ಮೌಖಿಕವಾಗಿ ತಾತ್ಕಾಲಿಕ ಹೊಣೆ ಹೊರಿಸಿದ್ದರು. ಆದರೆ ಇದೀಗ ಸುಧಾಕರ್ ಹೋಂ ಕ್ವಾರಂಟೈನ್ ಅವಧಿ ಮುಗಿಸಿ ರೀ ಎಂಟ್ರಿ ಕೊಟ್ಟಿದ್ದಾರೆ.

ಕೊರೊನಾ ಹೊಣೆ ಯಾರಿಗೆ..?
ಯಡಿಯೂರಪ್ಪ ಅವರಿಗೆ ಇಂದಿನಿಂದ ಬೆಂಗಳೂರು ನಿರ್ವಹಣೆ ಹೊಣೆ ಯಾರಿಗೆ ಕೊಡ್ಬೇಕು ಅನ್ನೋ ಗೊಂದಲ ಸೃಷ್ಟಿಯಾಗಿದೆ. ನಿನ್ನೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ ಅಶೋಕ್ ಮುಖ್ಯಪಾತ್ರ ವಹಿಸಿದ್ದರು. ಇಂದಿನಿಂದ ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ಯಾರು ಮುಖ್ಯಪಾತ್ರ ವಹಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇಂದಿನ ಸಭೆಯಲ್ಲಿ ಸಿಎಂ ನಂತರದ ಮುಖ್ಯಪಾತ್ರ ಅಶೋಕ್ ಅವರದ್ದಾ ಅಥವಾ ಸುಧಾಕರ್ ಅವರದ್ದಾ ಎಂಬ ಪ್ರಶ್ನೆ ಎದ್ದಿದೆ. ಬೆಂಗಳೂರು ಕೊರೊನಾ ನಿರ್ವಹಣೆ ಹೊಣೆಯನ್ನ ಸಿಎಂ ಅವರು ಯಾವ ರೀತಿ, ಯಾರಿಗೆ ಅಂತ ಹಂಚ್ತಾರೆ ಎಂಬುದೇ ಕುತೂಹಲ ಹುಟ್ಟಿಸಿದೆ. ಒಟ್ಟಿನಲ್ಲಿ ಬೆಂಗಳೂರು ಕೊರೊನಾ ನಿರ್ವಹಣಾ ಉಸ್ತುವಾರಿ ಹುದ್ದೆ ಮತ್ತೆ ಗೊಂದಲ, ಪಜೀತಿಗೆ ಕಾರಣವಾಗಿದೆ.