Connect with us

Districts

ಜನರನ್ನ ಮನೆಯೊಳಗೆ ಬಿಟ್ಟುಕೊಳ್ಳದವ್ರು ನಿಮ್ಮನ್ನ ಉದ್ಧಾರ ಮಾಡ್ತಾರಾ: ಶಿವರಾಮೇಗೌಡ

Published

on

ಮಂಡ್ಯ: 20 ವರ್ಷಗಳ ಕಾಲ ದಿವಂಗತ ಅಂಬರೀಶ್ ಅವರು ಅಧಿಕಾರದಲ್ಲಿದ್ದರು. ಅಂದು ಡಾಬರ್ ನಾಯಿ ಮನೆ ಹೊರಗಡೆ ಕಟ್ಕೊಂಡು ಜನರನ್ನು ಮನೆ ಒಳಗೆ ಬಿಟ್ಟುಕೊಳ್ಳದೇ ಇದ್ದೋರು, ಈಗ ನಿಮ್ಮನ್ನು ಉದ್ಧಾರ ಮಾಡ್ತಾರಾ ಎಂದು ಸಂಸದ ಶಿವರಾಮೇಗೌಡ ಸುಮಲತಾ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ರಾತ್ರಿ ನಾಗಮಂಗಲದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ವೇಳೆ, ನಾವು ನಾಗಮಂಗಲದ ಅಭಿವೃದ್ಧಿಗೆ 1,500 ಕೋಟಿ ಅನುದಾನ ನೀಡಿದ್ದೇವೆ. ಆದ್ರೆ ಎದುರಾಳಿ ಅಭ್ಯರ್ಥಿ ಸುಮಲತಾ ಬೇರೆ ಎಲ್ಲಿಂದಲೋ ಬಂದವರಲ್ಲ, ಅವರ ಪತಿಗೆ 20 ವರ್ಷಗಳ ಕಾಲ ಅಧಿಕಾರ ಕೊಟ್ಟಿದ್ದೀವಿ. ಅವರ ಕೈಯಲ್ಲಿ ಅಧಿಕಾರ ಇದ್ದಾಗ ಅವರು ಯಾರಿಗೆ ಏನು ಮಾಡಿದ್ದಾರೆ? ನಿಮ್ಮ ನಾಗಮಂಗಲದವರಿಗೆ ಯಾರಿಗಾದರೂ ಟೀ, ಕಾಫಿ ಕೊಟ್ಟಿದ್ದಾರಾ? ಹೋಗಲಿ ಒಂದು ಲೋಟ ನೀರು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿ ಕಿಡಿಕಾರಿದರು.

ಅಧಿಕಾರವನ್ನು ಉಂಡು, ಮಜಾ ಮಾಡಿ ಈಗ ಮಂಡ್ಯ ಜಿಲ್ಲೆ ಉದ್ಧಾರ ಮಾಡ್ತೀವಿ ಅಂತ ಬಂದಿದ್ದಾರೆ. ಅವರ ಜೊತೆ ಜೋಡೆತ್ತುಗಳು ಅಂತ ಇಬ್ಬರು ಬಂದಿದ್ದಾರೆ. ಅವರೆಲ್ಲರೂ 18ನೇ ತಾರೀಖಿನ ತನಕ ಮಾತ್ರ ಮಂಡ್ಯದಲ್ಲಿ ಕಾಣ ಸಿಗುತ್ತಾರೆ. 18ರ ಬಳಿಕ ಆ ಟೂರಿಂಗ್ ಟಾಕೀಸ್ ಜಾಗ ಖಾಲಿಯಾಗುತ್ತೆ. ನಿಮ್ಮ ಹತ್ತಿರ ಸುಮಲತಾ ಅವರ ನಂಬರ್ ಇದೆಯಾ? ಅವರ ಬೆಂಬಲಿಗರ ನಂಬರ್ ಆದ್ರೂ ಇದೆಯಾ? ಅವರು ನಿಮ್ಮ ಕೈಗೆ ಸಿಗ್ತಾರಾ? ಏನೇ ಸಮಸ್ಯೆ ಆದರೂ, ನೀವು ಬೈದರೂ ಬೈಸ್ಕೊಳ್ಳೊಕೆ ನಾವು ಮಾತ್ರ ಸಿಗೋದು ಎಂದು ಸುಮಲತಾರಿಗೆ ಟಾಂಗ್ ಕೊಟ್ಟರು.