Connect with us

International

ಹೆಡ್‍ಫೋನ್ ಓವರ್ ಹೀಟಾಗಿ ಬಾಲಕ ಸಾವು!

Published

on

ಕೌಲಾಲಂಪುರ್: ಚಾರ್ಜಿಗೆ ಹಾಕಿದ ಹೆಡ್‍ಫೋನ್ ಓವರ್ ಹೀಟಾಗಿ ಶಾಕ್ ಹೊಡೆದು 16 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಮಲೇಷ್ಯಾದ ರೇಂಬು ಪ್ರದೇಶದಲ್ಲಿ ನಡೆದಿದೆ.

ಸೋಮವಾರ ರಾತ್ರಿ ವೇಳೆ ಬಾಲಕ ತನ್ನ ರೂಂನಲ್ಲಿ ಬ್ಲೂಟೂತ್ ವಯರ್‌ಲೆಸ್ ಹೆಡ್‍ಫೋನ್‍ನನ್ನು ಚಾರ್ಜಿಗೆ ಹಾಕಿಕೊಂಡು ಬಳಸುತ್ತಿದ್ದ. ಆಗ ಹೆಡ್‍ಫೋನ್ ಓವರ್ ಹೀಟಾದ ಪರಿಣಾಮ ಶಾಕ್ ಹೊಡೆದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾತ್ರಿ ಸುಮಾರು 12.45 ರ ಹೊತ್ತಿಗೆ ಬಾಲಕ ಮೃತಪಟ್ಟಿದ್ದಾನೆ. ಬೆಳಗ್ಗೆ ತಾಯಿ ಕೆಲಸಕ್ಕೆ ಹೋಗುವಾಗ ಮಗ ನೆಲದ ಮೇಲೆ ಮಲಗಿದ್ದನ್ನು ನೋಡಿ ಆತ ನಿದ್ರೆ ಮಾಡುತ್ತಿದ್ದಾನೆ ಎಂದು ಸುಮ್ಮನಾಗಿದ್ದಾರೆ. ನಂತರ ಮಧ್ಯಾಹ್ನದ ವೇಳೆಗೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸಾಗಿದ್ದಾರೆ. ಈ ವೇಳೆ ಮಗನನ್ನು ಎಬ್ಬಿಸಲು ರೂಂಗೆ ಹೋದಾಗ ಆತ ಮೃತ ಪಟ್ಟಿರುವ ಸಂಗತಿ ತಾಯಿಗೆ ತಿಳಿದಿದೆ.

ಬಾಲಕನ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಾಗಲಿ, ಗುರುತುಗಳಾಗಲಿ ಆಗಿರಲಿಲ್ಲ. ಆದರೆ ಬಾಲಕನ ಎಡಕಿವಿಯಲ್ಲಿ ರಕ್ತದ ಕಲೆಗಳನ್ನು ಕಂಡು ತಕ್ಷಣ ಪೊಲೀಸರಿಗೆ ತಾಯಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶಿಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಫಲಿತಾಂಶದಲ್ಲಿ ಬಾಲಕ ಹೆಡ್‍ಫೋನ್ ಓವರ್ ಹೀಟಾದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿರುವುದು ಸ್ಪಷ್ಟವಾಗಿದೆ.

ಈ ಹಿಂದೆ 2018 ರ ಜೂನ್ ತಿಂಗಳಲ್ಲಿ ಮಲೇಷ್ಯಾದಲ್ಲಿ ಚಾರ್ಜಿಗೆ ಹಾಕಿದ್ದ ವೇಳೆ ಓವರ್ ಹೀಟಾದ ಬ್ಲಾಕ್‍ಬೆರ್ರಿ ಹಾಗೂ ಹುವಾವೇ ಸ್ಮಾರ್ಟ್‍ಫೋನ್‍ಗಳು ಬ್ಲಾಸ್ಟ್ ಆಗಿತ್ತು. ಒಡಿಶಾದಲ್ಲಿ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಚಾರ್ಜಿಗೆ ಹಾಕಿದ್ದ ನೋಕಿಯಾ 5233 ಫೋನ್ ಸ್ಫೋಟಗೊಂಡು ವ್ಯಕ್ತಿಯೋರ್ವ ತೀವ್ರ ಗಾಯಗೊಂಡಿದ್ದನು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv