Connect with us

Bollywood

ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

Published

on

ಮುಂಬೈ: ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ.

ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು.

ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು.

ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv