Wednesday, 20th February 2019

Recent News

ವಾಟ್ಸಪ್‍ ನಲ್ಲಿ ಇನ್ನು ಮುಂದೆ ಗ್ರೂಪ್ ವಿಡಿಯೋ ಕಾಲ್ ಮಾಡಿ!

ನವದೆಹಲಿ: ಇನ್ನು ಮುಂದೆ ವಾಟ್ಸಪ್ ನಲ್ಲಿ ಗ್ರೂಪ್ ವಿಡಿಯೋ ಹಾಗೂ ವಾಯ್ಸ್ ಕಾಲ್ ಮಾಡಬಹುದು.

ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ಗ್ರಾಹಕರಿಗಾಗಿ ಹಲವು ಬದಲಾವಣೆಗಳನ್ನು ಮಾಡುತ್ತಲೇ ಇದ್ದು, ಇದೀಗ ನೂತನ ಗ್ರೂಪ್ ವಾಯ್ಸ್ ಕಾಲಿಂಗ್ ಹಾಗೂ ವಿಡಿಯೋ ಕಾಲಿಂಗ್ ಫೀಚರನ್ನು ಪರಿಚಯಿಸಿದೆ.

ಗರಿಷ್ಟ ಒಂದು ಬಾರಿಗೆ ನಾಲ್ಕು ಮಂದಿಗೆ ವಿಡಿಯೋ ಹಾಗೂ ವಾಯ್ಸ್ ಕರೆ ಮಾಡಬಹುದಾಗಿದೆ. ಈ ಫೀಚರ್ ಗಳನ್ನು ಪಡೆದುಕೊಳ್ಳಲು ಆಂಡ್ರಾಯ್ಡ್ ಹಾಗೂ ಐಓಎಸ್ ಗ್ರಾಹಕರು ಆ್ಯಪ್ ಅಪ್‍ಡೇಟ್ ಮಾಡಿಕೊಳ್ಳಬೇಕು.

ವರದಿಯ ಪ್ರಕಾರ ಪ್ರಸ್ತುತ ವಾಟ್ಸಪ್ ಬಳಕೆದಾರರು 200 ಕೋಟಿ ನಿಮಿಷಕ್ಕೂ ಹೆಚ್ಚು ನಿಮಿಷಗಳನ್ನು ಪ್ರತಿನಿತ್ಯ ವಾಟ್ಸಪ್ ಕರೆಯಲ್ಲಿ ಕಳೆಯುತ್ತಾರೆ. ಈ ಮೊದಲು ವಾಟ್ಸಪ್ 2014 ರಲ್ಲಿ ವಾಯ್ಸ್ ಕಾಲಿಂಗ್ ಸೌಲಭ್ಯ ಹಾಗೂ 2016 ರಲ್ಲಿ ವಿಡಿಯೋ ಕಾಲಿಂಗ್ ಗ್ರಾಹಕರಿಗೆ ಪರಿಚಯಿಸಿತ್ತು.

ಕರೆ ಮಾಡೋದು ಹೇಗೆ?
ವಾಟ್ಸಪ್ ನಲ್ಲಿ ಒಬ್ಬ ಬಳಕೆದಾರರಿಗೆ ಮೊದಲು ವೀಡಿಯೊ ಕಾಲಿಂಗ್ ಮಾಡಬೇಕು. ವಿಡಿಯೋ ಕಾಲಿಂಗ್ ಕನೆಕ್ಟ್ ಆದ ಬಳಿಕ, ವಾಟ್ಸಪ್ ನ ಬಲಭಾಗದಲ್ಲಿ ಕಂಡುಬರುವ `ಆಡ್ ಫ್ರೆಂಡ್’ ಐಕಾನ್ ಅನ್ನು ಕ್ಲಿಕ್ ಮಾಡಿ, ಅದರಲ್ಲಿ ಪುನಃ ಇನ್ನೊಬ್ಬ ವಾಟ್ಸಪ್ ಬಳಕೆದಾರರಿಗೆ ಕರೆ ಮಾಡಬಹುದು. ಹೀಗೆ ಒಟ್ಟು ನಾಲ್ಕು ಸ್ನೇಹಿತರನ್ನು ಒಟ್ಟಿಗೆ ಸಂಪರ್ಕಿಸಬಹುದು. ಇದೇ ರೀತಿ ವಾಯ್ಸ್ ಕಾಲಿಂಗ್ ಅನ್ನು ಸಹ ಮಾಡಬಹುದಾಗಿದೆ.

ಯಾವ ಆ್ಯಪಲ್ಲಿ ಎಷ್ಟು ಮಂದಿಗೆ ವಿಡಿಯೋ ಕರೆ ಮಾಡಬಹುದು?
ಮೆಸೇಂಜಿಗ್ ಆ್ಯಪ್ ಗಳಾದ ಫೇಸ್ಬುಕ್ ಮೆಸೆಂಜರ್ ನಲ್ಲಿ 50 ಮಂದಿ, ಸ್ಕೈಪ್ ನಲ್ಲಿ 25 ಮಂದಿ, ಸ್ನಾಪ್ ಚಾಟ್‍ನಲ್ಲಿ ಒಂದೇ ಬಾರಿಗೆ 16 ಮಂದಿಗೆ ವಿಡಿಯೋ ಕಾಲ್ ಮಾಡಬಹುದು. ಈ ವರ್ಷದ ಕೊನೆಯಲ್ಲಿ ಐಓಎಸ್ 12 ಅಪ್‍ಡೇಟ್ ಆದ ಬಳಿಕ ಆಪಲ್‍ನ ಫೇಸ್‍ಟೈಮ್‍ನಲ್ಲಿ ಏಕಕಾಲದಲ್ಲಿ 32 ಮಂದಿಗೆ ವಿಡಿಯೋ ಕಾಲ್ ಮಾಡಬಹುದಾಗಿದೆ.

Leave a Reply

Your email address will not be published. Required fields are marked *