Connect with us

Latest

ವಾಟ್ಸಪ್ ಡೌನ್ – ಆಕ್ರೋಶ ಹೊರ ಹಾಕಿದ ನೆಟ್ಟಿಗರು

Published

on

ನವದೆಹಲಿ: ವಿಶ್ವದ ಜನಪ್ರಿಯ ಮೆಸೇಂಜಿಗ್ ಅಪ್ಲಿಕೇಶನ್ ವಾಟ್ಸಪ್ ಮಂಗಳವಾರ ಕೆಲ ಹೊತ್ತು ಸ್ಥಗಿತಗೊಂಡಿದ್ದರಿಂದ ವಿಶ್ವದಾದ್ಯಂತ ಬಳಕೆದಾರರು ಕೆಲ ಕಾಲ ಸಮಸ್ಯೆ ಎದುರಿಸಿದರು.

ವಾಟ್ಸಪ್ ಮೆಸೇಜ್ ಸೆಂಡ್ ಆಗುತ್ತಿಲ್ಲ ಹಾಗೂ ಆ್ಯಪ್ ಲೋಡಿಂಗ್ ತೆಗೆದುಕೊಳ್ಳುತ್ತಿಲ್ಲ ಎಂದು ಕೆಲ ನೆಟ್ಟಿಗರು ಟ್ವೀಟ್ ಮೂಲಕ ದೂರಿದ್ದಾರೆ.

ಮಂಗಳವಾರ ರಾತ್ರಿ 11.50 ರಿಂದ ಸಮಸ್ಯೆ ಕಾಣಿಕೊಂಡಿತ್ತು. ಇದಾದ ಕೆಲ ಹೊತ್ತಿಗೆ ವಾಟ್ಸಪ್ ಎಂದಿನಂತೆ ಆರಂಭವಾಯಿತು. ಆದರೆ ಯಾವ ಕಾರಣಕ್ಕೆ ಸ್ಥಗಿತಗೊಂಡಿತ್ತು ಎನ್ನುವ ಸ್ಪಷ್ಟನೆಯನ್ನು ವಾಟ್ಸಪ್ ಕೊಟ್ಟಿಲ್ಲ.

ನಾನು ಡೇಟಾ ಕ್ಲಿಯರ್ ಮಾಡಿ, ಮೊಬೈಲ್ ರಿಸ್ಟಾರ್ಟ್ ಮಾಡಿದರೂ ವಾಟ್ಸಪ್ ಮೆಸೇಜ್ ಹೋಗಲಿಲ್ಲ. ಬಳಿಕ ಅನ್ ಇನ್‍ಸ್ಟಾಲ್ ಹಾಗೂ ಇನ್‍ಸ್ಟಾಲ್ ಮಾಡಿದರೂ ಸಮಸ್ಯೆ ಹಾಗೇ ಇತ್ತು ಎಂದು ಸುಜ್ ಎಂಬವರು ಟ್ವೀಟ್ ಮಾಡಿದ್ದಾರೆ.

ವಾಟ್ಸಪ್ ಮುಕ್ತಾಯವಾಗುವ ಕಾಲ ಬಂದಿದೆ ಎಂದು ಲಿಬ್ರೆಟ್ಟೋ ಎಂಬವರು ಟ್ವೀಟ್ ಮಾಡಿ, ವಾಟ್ಸಪ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv