Friday, 13th December 2019

Recent News

ಮಹಿಳೆಯನ್ನು ಕಿಸ್ ಮಾಡಿದ್ರೆ ತಪ್ಪೇನು – ಅಮಲಾ ಪೌಲ್ ಪ್ರಶ್ನೆ

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ತಮ್ಮ ಮುಂಬರುವ ‘ಅದಾಯಿ’ ಚಿತ್ರದಲ್ಲಿ ವಿಜೆ ರಮ್ಯಾ ಜೊತೆ ಲಿಪ್‍ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ದೃಶ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವು ಜನರು ಅವರನ್ನು ಟೀಕಿಸಲು ಶುರು ಮಾಡಿದ್ದರು. ಈಗ ಈ ಬಗ್ಗೆ ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಅಮಲಾ ಪೌಲ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರನ್ನು ಕಿಸ್ಸಿಂಗ್ ಸೀನ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು, ಮಹಿಳೆಯನ್ನು ಕಿಸ್ ಮಾಡಿದ್ದರೆ ಏನೂ ತಪ್ಪು? ಈ ದೃಶ್ಯ ಸಹಜ ಹೊರತು ಸ್ಕ್ರಿಪ್ಟ್ ಮಾಡಲಿಲ್ಲ. ಒಮ್ಮೆ ನೀವು ಕ್ಯಾರೆಕ್ಟರ್ ನಲ್ಲಿ ಇದ್ದರೆ, ನಿಮ್ಮ ಒಳಗಿರುವ ನಟಿಯ ಪ್ರತಿಭೆಯನ್ನು ಹೊರಹಾಕಬೇಕು ಎಂದರು.

ಬಳಿಕ ಚಿತ್ರದ ಬಗ್ಗೆ ಮಾತನಾಡಿದ ಅಮಲಾ, ಈ ಚಿತ್ರದಲ್ಲಿ ಲೈಂಗಿಕತೆ ಏನೂ ಇಲ್ಲ. ಚಿತ್ರದ ದೃಶ್ಯಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸಿನಿಮಾ ವೀಕ್ಷಿಸಬೇಕು. ನಾನು ಪವರ್ ಫುಲ್ ಎಂದು ಭಾವಿಸಿದೆ. ಮೊದಲಿನಲ್ಲಿ ಈ ದೃಶ್ಯ ಮಾಡುವುದು ಹೇಗೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಈ ದೃಶ್ಯ ಮಾಡಿದ ನಂತರ ನನ್ನ ದೇಹ ಆರಾಮದಾಯಕವಾಗಿತ್ತು. ಅಲ್ಲದೆ ನಾನು ಜಗತ್ತಿನ ಯಾವುದೇ ಸವಾಲನ್ನು ಎದುರಿಸಬಹುದು ಎಂದು ಅನಿಸಿತ್ತು. ಅದಾಯ್ ನನಗೆ ಶಕ್ತಿ ಹಾಗೂ ಟೀಂ ಸ್ಪಿರಿಟ್ ನೀಡಿದೆ ಎಂದು ಹೇಳಿದ್ದಾರೆ.

ಅದಾಯಿ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲು ನಾನು ನನ್ನ ತಾಯಿ ಬಳಿ ನಗ್ನ ದೃಶ್ಯದ ಬಗ್ಗೆ ಹೇಳಿದೆ. ಆಗ ನನ್ನ ತಾಯಿ, ಆ ಚಿತ್ರಕ್ಕೆ ಅಂತಹ ದೃಶ್ಯ ಬೇಕಾದರೆ ನಟಿಸು ಎಂದು ಅವರು ಹೇಳಿದ್ದರು ಎಂದು ಅಮಲಾ ಹೇಳಿದ್ದಾರೆ.

ಅದಾಯಿ ಚಿತ್ರದಲ್ಲಿ ಅಮಲಾ ಬೋಲ್ಡ್ ಯುವ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ಅಮಲಾ ಪೌಲ್ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಟಿ ಅಮಲಾ, ವಿಜೆ ರಮ್ಯಾ ಅವರ ಜೊತೆ ಲಿಪ್‍ಲಾಕ್ ದೃಶ್ಯದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ದೊರೆತಿದ್ದು, ಚೆನ್ನೈ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿದೆ.

Leave a Reply

Your email address will not be published. Required fields are marked *