Latest
ಪಶ್ಚಿಮ ಬಂಗಾಳದಲ್ಲಿ ‘ಮಾ ಕೀ ರಸೋಯಿ’ ಆರಂಭ

ಕೋಲ್ಕತ್ತಾ: ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿಯೇ ಪಶ್ಚಿಮ ಬಂಗಾಳ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ‘ಮಾ ಕೀ ರಸೋಯಿ’ (ಅಮ್ಮನ ಅಡುಗೆ ಮನೆ) ಇಂದಿನಿಂದ ಆರಂಭವಾಗಲಿದೆ.
ಬಡವರಿಗಾಗಿ ಐದು ರೂಪಾಯಿಗೆ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಮುಂದಾಗಿದೆ. ಊಟದಲ್ಲಿ ಅನ್ನ-ಸಾಂಬಾರ್, ಪಲ್ಯ ಮತ್ತು ಒಂದು ಮೊಟ್ಟೆ ಸಿಗಲಿದೆ. ಈಗಾಗಲೇ ಮಾ ಕೀ ರಸೋಯಿ 16 ಬ್ಯೂರೋ ಕಚೇರಿಗಳಿಗೆ ಊಟ ಸರಬರಾಜು ಮಾಡುತ್ತಿದೆ. ಇಂದು ನಗರದ ಕೆಲ ಭಾಗಗಳಲ್ಲಿ ಆರಂಭವಾಗುತ್ತಿರುವ ಕ್ಯಾಂಟೀನ್ ಗಳಿಗೆ ಮಮತಾ ಬ್ಯಾನರ್ಜಿ ವರ್ಚ್ಯೂವಲ್ ಸಭೆ ಮೂಲಕ ಚಾಲನೆ ನೀಡಲಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ನಗರಗಳಿಗೂ ಮಾ ಕೀ ರಸೋಯಿ ವಿಸ್ತರಿಸುವ ಗುರಿಯನ್ನ ದೀದಿ ಸರ್ಕಾರ ಹೊಂದಿದೆ. ಚುನಾವಣೆ ಹಿನ್ನೆಲೆ ಸರ್ಕಾರ ಈ ಯೋಜನೆ ಆರಂಭಿಸಿದೆ ಎಂದು ಬಿಜೆಪಿ ಟೀಕಿಸಿದೆ.
