Connect with us

Latest

ಪಶ್ಚಿಮ ಬಂಗಾಳದಲ್ಲಿ ಕ್ರಿಶಿಕ್ ಸೊಹೊ ಭೋಜ್ ನಡೆಸಲಿರುವ ಬಿಜೆಪಿ

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂದಾಗುತ್ತಿದ್ದು, ಫೆಬ್ರವರಿ 18 ರಂದು ಭಾರತೀಯ ಜನತಾ ಪಾರ್ಟಿ ಕಿಸಾನ್ ಮೋರ್ಚಾ, ಕ್ರಿಶನ್ ಸೊಹೊ ಭೋಜ್ ಕಾರ್ಯಕ್ರಮವನನ್ನು ಆಯೋಜಿಸಿದೆ.

ಈ ಕಾರ್ಯಕ್ರಮದ ಮೂಲಕ 40,000 ಸಾವಿರ ಹಳ್ಳಿಗಳಲ್ಲಿನ ರೈತರನ್ನು ಕೃಷಕ್ ಸುರಕ್ಕಾ ಅಭಿಯಾನದ ಅಡಿ ತಲುಪುವುದಾಗಿದೆ.

ಸೊಹೊ ಬೋಜ್ ಆರಂಭದಲ್ಲಿ ಗ್ರಾಮಪಂಚಾಯತಿಗಳನ್ನು ಮಾತ್ರ ಗುರಿಯಾಗಿಸಿಕೊಂಡಿತ್ತು. ಆದರೆ ಅದರ ಯಶಸ್ಸಿನ ನಂತರ ಇದೀಗ ಮಂಡಳಿಗಳನ್ನು ಪರಿಗಣಿಸುತ್ತಿದೆ. ಸೊಹೊ ಭೋಜ್ ಕಾರ್ಯಕ್ರಮದ ಮೂಲಕ ರೈತರ ಕುಟುಂಬಗಳು ಒಗ್ಗೂಡಿ ಏಕ್ ಮುತಿ ಚಲ್(ಒಂದು ಮುಷ್ಠಿ ಅಕ್ಕಿ) ಬೇಯಿಸಿ ಒಟ್ಟಿಗೆ ಕುಳಿತು ಊಟ ಮಾಡುವುದಾಗಿದೆ.

ಈ ವಿಚಾರವಾಗಿ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಮಹಾದೇವ್ ಸರ್ಕಾರ್, ಕೇಂದ್ರವು ಯೋಜಿಸುತ್ತಿರುವ ಎಲ್ಲಾ ಪ್ರಯೋಜನಗಳನ್ನು ರೈತರಿಗೆ ಒದಗಿಸಿಕೊಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಟಿಎಂಸಿ ಆಡಳಿತದ ರಾಜ್ಯ ಸರ್ಕಾರ, ರೈತರ ಅನುಕೂಲಕ್ಕಾಗಿ ಯಾವುದೇ ಸರಿಯಾದ ಯೋಜನೆ ರೂಪಿಸಿಲ್ಲ ಮತ್ತು ರಾಜ್ಯದ ರೈತರಿಗೆ ಕೇಂದ್ರದ ಕಲ್ಯಾಣ ಕಾರ್ಯಕ್ರಮಗಳಿಂದ ವಂಚನೆಯಾಗಿದೆ.

ಜೊತೆಗೆ ಫಾಸಲ್ ಭೀಮಾ ಅಥವಾ ಬೆಳೆ ವಿಮೆಗಳನ್ನು ಸಹ ಯಾವುದೇ ರೈತರಿಗೆ ನೀಡಲಾಗಿಲ್ಲ. ಆದರೆ ಈ ಅಭಿಯಾನದ ಮೂಲಕ ಬಿಜೆಪಿ ಇಪ್ಪತೈದು ಲಕ್ಷ ಕುಟುಂಬಗಳನ್ನು ಮತ್ತು 7 ಸಾವಿರ ರೈತರನ್ನು ತಲುಪಲಿದೆ ಎಂದು ಹೇಳಿದರು. ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ‘ಮಾ ಕೀ ರಸೋಯಿ’ ಆರಂಭ

Click to comment

Leave a Reply

Your email address will not be published. Required fields are marked *