Connect with us

Latest

ನಂದಿಗ್ರಾಮದಲ್ಲಿ ಮಮತಾಗೆ ಸೋಲು ಖಚಿತ, ಹಾಗಾಗಿ ದೀದಿ ಭಯಭೀತರಾಗಿದ್ದಾರೆ – ಜಿ.ಪಿ ನಡ್ಡಾ

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಅವರು ಸೋಲುವುದು ಖಚಿತ. ಅವರ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರು ಜಯಗಳಿಸಲಿದ್ದಾರೆ ಹಾಗಾಗಿ ಮಮತಾ ಬ್ಯಾನರ್ಜಿಯವರು ಭಯಭೀತರಾಗಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜೆ.ಪಿ ನಡ್ಡಾ ಭವಿಷ್ಯ ನುಡಿದಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜಿ.ಪಿ ನಡ್ಡಾ, ಸುವೇಂದು ಅಧಿಕಾರಿಯವರು ನಂದಿಗ್ರಾಮದಲ್ಲಿ ಸ್ಪರ್ಧಿಸಿರುವುದರಿಂದ ದೀದಿ ಅವರಿಗೆ ಸೋಲು ಕಾಣುವ ಭಯ ಉಂಟಾಗಿದ್ದು, ಮುಂದೆ ನಡೆಯಲಿರುವ ನಂದಿಗ್ರಾಮದ ಸ್ಪರ್ಧೆಯಲ್ಲಿ ಸುವೇಂದು ಅಧಿಕಾರಿ ಜಯಗಳಿಸುವುದು ಪಕ್ಕಾ. ಈ ಸೋಲಿನಿಂದ ತೃಣಮೂಲ ಕಾಂಗ್ರೆಸ್ ನೆಲಕಚ್ಚಳಿದೆ ಎಂದು ಮಮತಾ ವಿರುದ್ಧ ನಡ್ಡಾ ಗುಡುಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟುಹೋಗಿದೆ. ಮಹಿಳೆಯರ ಅಪಹರಣ, ಕೊಲೆ, ನಾಪತ್ತೆ ಪ್ರಕರಣ ಹಾಗೂ ಜಲ್ಪೈಗುರಿಯಲ್ಲಿ ಇಬ್ಬರು ಬುಡಕಟ್ಟು ಕುಟುಂಬದ ಬಾಲಕಿಯರ ಮೇಲೆ ಅತ್ಯಾಚಾರ ನಡೆದರು ಕೂಡ ಅರೋಪಿಗಳ ವಿರುದ್ಧ ಯಾವುದೇ ರೀತಿಯ ಪ್ರಕರಣ ದಾಖಲಿಸಿಕೊಂಡಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ಇಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆರೋಪಿಸಿದರು.

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಂದು ಪಶ್ಚಿಮ ಬಂಗಾಳದಲ್ಲಿ ವಿಧಿಸಿದ್ದ ಕರ್ಫ್ಯೂ ವಿರುದ್ಧವು ನಡ್ಡಾ ಕಿಡಿಕಾರಿದ್ದು, ಇದರೊಂದಿಗೆ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಂಪ್ರದಾಯದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಶ್ಚಿಮಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಈಗಾಗಲೇ ಪ್ರಥಮ ಹಂತದ ಮತದಾನ ಯಶಸ್ವಿಯಾಗಿ ಮಾರ್ಚ್ 27 ರಂದು ನಡೆದಿದೆ. ಮುಂದಿನ ಹಂತದ ಚುನಾವಣೆ ಏಪ್ರಿಲ್ 1ರಂದು ನಡೆಯಲಿದ್ದು, ಏಪ್ರಿಲ್ 27 ರಂದು ಎಲ್ಲಾ ಹಂತದ ಮತದಾನ ಮುಕ್ತಾಯವಾಗಲಿದೆ.

Click to comment

Leave a Reply

Your email address will not be published. Required fields are marked *