Connect with us

Bengaluru City

ಎರಡನೇ ದಿನದ ವೀಕೆಂಡ್ ಕರ್ಫ್ಯೂ – ಕೆ.ಆರ್.ಮಾರ್ಕೆಟ್ ನಲ್ಲಿ ವ್ಯಾಪಾರಿಗಳಿಗೆ ಲಾಠಿ ಏಟು

Published

on

ಬೆಂಗಳೂರು: ಎರಡನೇ ದಿನದ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕೆ.ಆರ್.ಮಾರ್ಕೆಟ್ ನಲ್ಲಿ ಪೊಲೀಸರು ವ್ಯಾಪಾರಿಗಳನ್ನ ಸ್ಥಳದಿಂದ ಖಾಲಿ ಮಾಡಿಸುತ್ತಿದ್ದಾರೆ. ಗುಂಪುಗೂಡಿದ ಹೂ ವ್ಯಾಪಾರಿಗಳಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವಂತಿಲ್ಲ ಎಂದು ವ್ಯಾಪಾರಿಗಳನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ನಿನ್ನೆ ಹೇಳಿದ್ರೆ ನಾವು ಮಾರುಕಟ್ಟೆಗೆ ಬರುತ್ತಿರಲಿಲ್ಲ. ಈಗಾಗಲೇ ಹೂ ಖರೀದಿ ಮಾಡಿದ್ದೇವೆ. ಈಗ ವ್ಯಾಪಾರ ಮಾಡಬೇಡಿ ಅಂತ ಹೇಳಿದ್ರೆ ಹಾಕಿದ ಬಂಡವಾಳ ಸಹ ಬರಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಇತ್ತ ಕಬ್ಬನ್ ಪಾರ್ಕ್ ನಲ್ಲಿ ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಾಯು ವಿಹಾರದಲ್ಲಿ ತಲ್ಲೀನರಾಗಿದ್ದಾರೆ. ಪ್ರತಿದಿನಕ್ಕಿಂತ ಸಂಖ್ಯೆ ಕಡಿಮೆ ಇದ್ರೂ ಕೆಲವರು ಗುಂಪು ಗುಂಪಾಗಿ ವಾಕಿಂಗ್ ಮಾಡುತ್ತಿದ್ದಾರೆ. ಭಾನುವಾರ ಆಗಿದ್ದರಿಂದ ಬೆಂಗಳೂರಿನ ಜನ ಕೊರೊನಾ ಇರೋದನ್ನ ಮರೆತು ಮಾಂಸದಂಗಡಿಗಳ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ.

Click to comment

Leave a Reply

Your email address will not be published. Required fields are marked *