Recent News

ನಮ್ಮದು ಸೂಟ್‍ಕೇಸ್ ಸಾಗಿಸುವ ಸರ್ಕಾರವಲ್ಲ: ನಿರ್ಮಲಾ ಸೀತಾರಾಮನ್

ಚೆನ್ನೈ: ಸೂಟ್‍ಕೇಸ್ ಕೊಡುವುದು ಹಾಗೂ ತೆಗೆದುಕೊಳ್ಳುವುದನ್ನು ಮಾಡಲು ಮೋದಿಯವರದ್ದು ಸೂಟ್‍ಕೇಸ್ ಸಾಗಿಸುವ ಸರ್ಕಾರವಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಚೆನ್ನೈನಲ್ಲಿ ನಡೆದ  ಇಂಟರ್‌ನ್ಯಾಷನಲ್‌  ಬ್ಯುಸಿನೆಸ್ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ಬಜೆಟ್ ಪತ್ರಗಳನ್ನು ಸೂಟ್‍ಕೇಸ್‍ನಲ್ಲಿ ತರುವುದರ ಬದಲು ಬಟ್ಟೆಯಲ್ಲಿ ತಂದ ಕುರಿತು ಸ್ಪಷ್ಟನೆ ನೀಡುವ ವೇಳೆ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ. ಹಿಂದಿನ ಯುಪಿಎ ಸರ್ಕಾರ ಭ್ರಷ್ಟಾಚಾರ ಮಾಡಿದ್ದರಿಂದ ಸೂಟ್‍ಕೇಸ್ ತಂದಿತ್ತು. ನಾವು ಈಗ ಎಲ್ಲರಿಗೂ ಕಾಣುವಂತೆ ಹಾಗೂ ಭಾರತೀಯ ಸಂಸ್ಕೃತಿಯ ಪ್ರಕಾರ ಬಟ್ಟೆಯಲ್ಲಿ ಬಜೆಟ್ ದಾಖಲೆಗಳನ್ನು ತಂದಿದ್ದೇವೆ ಎಂದು ಕುಟುಕಿದ್ದಾರೆ.

ನಮ್ಮದು ಸೂಟ್‍ಕೇಸ್ ಹೊತ್ತೊಯ್ಯುವ ಸರ್ಕಾರವಲ್ಲ. ಹೀಗಾಗಿ 2019ರ ಬಜೆಟ್ ವೇಳೆ ನಾನು ಅದನ್ನು ತರಲಿಲ್ಲ. ಸೂಟ್‍ಕೇಸ್ ತರುವುದರಿಂದ ಏನೋ ತಂದಂತೆ ಗೋಚರಿಸುತ್ತದೆ. ಅಲ್ಲದೆ, ನಮ್ಮದು ಸೂಟ್‍ಕೇಸ್ ಸಾಗಿಸುವ ಸರ್ಕಾರವಲ್ಲ. ನಾವು ಸೂಟ್‍ಕೇಸ್ ಕೊಡುವುದು ಹಾಗೂ ತೆಗೆದುಕೊಳ್ಳುವುದನ್ನು ಮಾಡುವುದಿಲ್ಲ ಎಂದು ಪರೋಕ್ಷವಾಗಿ ಯುಪಿಎ ವಿರುದ್ಧ ಟೀಕಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ವೇಳೆ ಸೂಟ್‍ಕೇಸ್‍ನಲ್ಲಿ ಬಜೆಟ್ ದಾಖಲೆಗಳನ್ನು ತರದೆ, ದೇಶದ ಸಂಸ್ಕೃತಿಯಂತೆ ‘ಹೊತ್ತಿಗೆ’ಯಲ್ಲಿ ತಂದಿದ್ದರು. ಈ ಕುರಿತು ಸ್ಪಷ್ಟನೆ ಕೇಳಿದಾಗ ಸೂಟ್‍ಕೇಸ್ ತರುವುದು ವಿದೇಶಿ ಸಂಸ್ಕೃತಿ ಎಂದು ಹೇಳಿದ್ದರು.

ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು ‘ಹೊತ್ತಿಗೆ’ ಬಜೆಟ್ ಪುಸ್ತಕ ಹಾಗೂ ದಾಖಲೆಗಳನ್ನು ಕೆಂಪು ಬಟ್ಟೆಯಲ್ಲಿ ಮಾಧ್ಯಮಗಳಿಗೆ ಪ್ರದರ್ಶಿಸಿದ್ದರು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Leave a Reply

Your email address will not be published. Required fields are marked *