Connect with us

Food

ತಂಪಾದ ಕಲ್ಲಂಗಡಿ ಜ್ಯೂಸ್

Published

on

ಬೇಸಿಗೆಯ ಬೇಗೆ ಶುರುವಾಗಿದೆ. ಅಂಗಡಿ ಮುಗ್ಗಟ್ಟುಗಳಲ್ಲಿ ಪಾನೀಯಗಳ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಗೆ ರಾಶಿ ರಾಶಿ ಹಣ್ಣುಗಳು ಬಂದಿವೆ. ಕಲ್ಲಂಗಡಿ ಹೆಚ್ಚಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ತಂಪು ಮತ್ತು ಆರೋಗ್ಯಕರವಾದ ಕಲ್ಲಂಗಡಿ ಎಂದರೆ ಎಲ್ಲರಿಗೂ ಇಷ್ಟ. ಇದೇ ಹಣ್ಣನ್ನು ಕಟ್ ಮಾಡಿ ಹಾಗೇ ತಿನ್ನುವುದು ಮಾತ್ರವಲ್ಲದೆ ಜ್ಯೂಸ್ ಮತ್ತು ಸ್ಮೂತಿಯನ್ನ ಮನೆಯಲ್ಲಯೇ ತಯಾರಿಸಿ ಸವಿಯಿರಿ..


ಬೇಕಾಗುವ ಸಾಮಾಗ್ರಿಗಳು:
* ಕಲ್ಲಂಗಡಿ, ಕ್ಯೂಬ್ಸ್ – 2 ಕಪ್
* ಪುದಿನ ಸ್ವಲ್ಪ
* ನಿಂಬೆ ರಸ- 2 ಟೇಬಲ್ ಸ್ಪೂನ್
* ಪೆಪ್ಪರ್ ಪೌಡರ್ ಚಿಟಿಕೆ
* ಸಕ್ಕರೆ – 1 ಸ್ಪೂನ್

ಮಾಡುವ ವಿಧಾನ
* ಮೊದಲನೆಯದಾಗಿ 2 ಕಪ್ ಕಲ್ಲಂಗಡಿ ತೆಗೆದುಕೊಳ್ಳಿ.
* ನಂತರ ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿ, ನಿಂಬೆ ರಸ, ಪೆಪ್ಪರ್ ಪೌಡರ್, ಸಕ್ಕರೆ ಸೇರಿಸಿ.
(ಯಾವುದೇ ನೀರನ್ನು ಸೇರಿಸದೆ ಚೆನ್ನಾಗಿ ಮಿಶ್ರಣ ಮಾಡಿ)
* ಒಂದು ಗ್ಲಾಸ್‍ಗೆ ಕಲ್ಲಂಗಡಿ ಜ್ಯೂಸ್ ಹಾಕಿ ಪುದಿನಾದಿಂದ ಅಲಂಕರಿಸಿದರೆ ತಾಜಾ ಕಲ್ಲಂಗಡಿ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

ರುಚಿಯಾದ ಕಲ್ಲಂಗಡಿ ಸ್ಮೂತಿ

ಬೇಕಾಗುವ ಸಾಮಗ್ರಿಗಳು
* ಕಲ್ಲಂಗಡಿ ಹಣ್ಣು_ 2 ಕಪ್
* ಮೊಸರು- 1 ಕಪ್
* ಜೇನುತುಪ್ಪ-3 ಸ್ಪೂನ್
* ಐಸ್ ಕ್ಯೂಬ್ಸ್ 3

ಮಾಡುವ ವಿಧಾನ
* ಕಲ್ಲಂಗಡಿ ಹಣ್ಣು, ಜೇನು ಹಾಗೂ ಪುದಿನಾ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ
* ಇದೇ ಜಾರಿಗೆ ಮೊಸರು ಹಾಕಿ ಮತ್ತೆ ಚೆನ್ನಾಗಿ ರುಬ್ಬಿಕೊಳ್ಳಿ
* ನಂತರ ಒಂದು ಗ್ಲಾಸ್‍ಗೆ ರುಬ್ಬಿದ ಕಲ್ಲಂಗಡಿ ಸ್ಮೂತಿ ಹಾಕಿ ಐಸ್ ಕ್ಯೂಬ್ಸ್ ಹಾಕಿ ಬೇಕಾದಲ್ಲಿ ಸಕ್ಕರೆಯನ್ನು ಸೇರೆಸಿಕೊಳ್ಳಿ. ರುಚಿಯಾದ ತಂಪಾದ ಕಲ್ಲಂಗಡಿ ಸ್ಮೂತಿ ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *