Chamarajanagar

ಖಾಸಗಿ ಆಸ್ಪತ್ರೆಯ ನೀರಿನ ತೊಟ್ಟಿಯಲ್ಲಿ ಶಿಶು ಶವ ಪತ್ತೆ

Published

on

Share this

ಚಾಮರಾಜನಗರ: ಖಾಸಗಿ ಆಸ್ಪತ್ರೆಯ ಖಾಲಿ ನೀರಿನ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

ಅಂದಾಜು 6 ದಿನದ ಗಂಡು ಶಿಶು ಇದಾಗಿದ್ದು, ಕರುಳಬಳ್ಳಿ ಕತ್ತರಿಸದೇ ಹಾಗೆ ಬಿಟ್ಟಿದ್ದು, ಅಂಗವೈಕಲ್ಯ ಹೊತ್ತುಕೊಂಡು ಜನಿಸಿರುವ ಕಾರಣ ಹೆತ್ತವರು ಪ್ಲಾಸ್ಟಿಕ್ ಕವರ್‍ನಲ್ಲಿ ಮಗುವನ್ನು ಹಾಕಿ ಬಿಸಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದನ್ನೂ ಓದಿ: ಗೋಲ್‍ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಿಯತಮೆಗೆ ಪ್ರಪೋಸ್ ಮಾಡಿದ ಯುವಕ..!

ಆಸ್ಪತ್ರೆ ಸಿಬ್ಬಂದಿ ಶವಾಗಾರದ ಬಳಿ ಹೋದಾಗ ದುರ್ನಾತ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರಿನಲ್ಲಿ ಶಿಶು ಶವ ಪತ್ತೆಯಾಗಿದೆ. ಆಸ್ಪತ್ರೆಯಲ್ಲೇ ಹೆರಿಗೆಯಾಗಿದ್ದರೇ ಕರುಳ ಬಳ್ಳಿಯನ್ನು ಕತ್ತರಿಸುತ್ತಿದ್ದರಿಂದ ಆಸ್ಪತ್ರೆಯಲ್ಲಿ ಈ ಮಗು ಹುಟ್ಟಿಲ್ಲ. ಸಿಸಿಟಿವಿ ಪರಿಶೀಲಿಸಲಾಗುತ್ತಿದ್ದು ತನಿಖೆ ನಡೆಸಲಾಗುತ್ತಿದೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications