Connect with us

Bengaluru City

ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ

Published

on

ಬೆಂಗಳೂರು: ಅಂಡರ್ ಪಾಸ್ ಉದ್ಘಾಟನೆ ಆಗಿ ಕೇವಲ ಎರಡು ತಿಂಗಳಾಗಿದೆ. ಆದರೆ ರಸ್ತೆಯಲ್ಲಿ ಈಗ ನೀರು ಲಿಕೇಜ್ ಆಗುತ್ತಿದ್ದೆ. ಅದು ಜಲಮಂಡಳಿಯವರ ನಿರ್ಲಕ್ಷ್ಯ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಮಾಗಡಿ ರೋಡ್ ಹೌಸಿಂಗ್ ಬೋರ್ಡ್ ಬಸ್ ಸ್ಟಾಪ್ ಅಂಡರ್‍ಪಾಸ್‍ನಲ್ಲಿ ರಸ್ತೆಯಿಂದ ನೀರು ಹೊರ ಚಿಮ್ಮುತಿದೆ. ವಾಟರ್ ಪೈಪ್ ಲೈನ್ ಡ್ಯಾಮೇಜ್ ಆಗಿ ರಸ್ತೆ ತುಂಬೆಲ್ಲ ನೀರು ಹರಿಯುತ್ತಿದೆ.

ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಉದಾಹರಣೆ ಈ ಅಂಡರ್ ಪಾಸ್ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಉದ್ಘಾಟನೆ ಆಗಿರೋ ಈ ಅಂಡರ್ ಪಾಸ್ ಎಷ್ಟು ಕಳಪೆಯಾಗಿದೆ ಅಂದರೆ 15 ದಿನಗಳಿಂದ ಇಲ್ಲಿ ನೀರು ಹರಿಯಲು ಶುರುವಾಗಿದೆ. ನಾವು ಮೊದಲಿಗೆ ಮಳೆ ನೀರಿರಬಹುದು ಅಂದುಕೊಂಡಿದ್ದೆವು. ಆದರೆ ಇದು ಏನೋ ಡ್ಯಾಮೇಜಿನಿಂದಲೇ ನೀರು ಲೀಕ್ ಆಗುತ್ತಿದ್ದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಈ ವಿಷಯ ನಿಮ್ಮ ಗಮನಕ್ಕೆ ಬಂತಾ ಎಂದು ಸ್ಥಳೀಯ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಅವರನ್ನು ಕೇಳಿದ್ರೆ, ಅವರು ಬಿಡಬ್ಲ್ಯೂಎಸ್‍ಎಸ್‍ಬಿ ಅಧಿಕಾರಿಗಳಿಗೆ ಈ ಕಾಮಗಾರಿ ಬಗ್ಗೆ ಮೊದಲೇ ಹೇಳಿದ್ದೆವು ಇಲ್ಲಿ ನೀರಿನ ಪೈಪ್ ಲೈನ್ ಇದೆ ಎಂದು. ಆದರೆ ಅವರು ಸಿಎ ಬರ್ತಾರೆ ಅಂತ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

15 ದಿನಗಳಿಂದ ಸಮಸ್ಯೆ ಇದ್ದರೂ ಸಂಬಂಧಪಟ್ಟವರು ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ. ಎರಡು ತಿಂಗಳಲ್ಲೇ ಈ ಮಟ್ಟಿಗೆ ಹಾಳಾದರೆ ಮತ್ತೆ ಟೆಂಡರ್, ಅದೂ ಇದೂ ಅಂತ ಹಣ ತಿನ್ನುತ್ತಾರೆ. ಯಾವ ದುಡ್ಡು ಕೊಡದೇ ಸಮಸ್ಯೆ ಬಗೆಹರಿಸಬೇಕು ಅಂತ ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in