ಒಬ್ಬ ವ್ಯಕ್ತಿಗೆ ಮದುವೆ (Marriage) ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತಂತೆ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ನಂಬಲಾಗದಂತಹ ಅದೃಷ್ಟದೊಂದಿಗೆ ಪಡೆಯುತ್ತಾರೆ. ಕೆಲವೊಂದು ಬಾರಿ ವಯಸ್ಸಿನ ಅಂತರವೇ ಇರಬಹುದು. ಇದೀಗ ಇಂತದ್ದೇ ಜೋಡಿ (Couple) ಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಯುವಕರನ್ನು ರೊಚ್ಚಿಗೆಬ್ಬಿಸಿದೆ.
ಹೌದು. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ. ವೀಡಿಯೋದಲ್ಲಿರುವ ಜೋಡಿ ನೋಡಿದ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ಕಡಿಮೆ ವಯ್ಸಿನ ಅಂತರ ಇರುವ ಜೋಡಿಗಳನ್ನು ನಾವು ನೋಡಿರಬಹುದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿರೋ ಜೋಡಿ ನೋಡಿ ಯುವಕರೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ‘ಲೈಫ್ ಇಸ್ ಬ್ಯುಟಿಫುಲ್’ ಹನಿಮೂನ್ ಮೂಡ್ ನಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್
ವೀಡಿಯೋದಲ್ಲೇನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವಧು ತನ್ನ ಪಕ್ಕದಲ್ಲಿ ಕುಳಿತಿರುವ ವೃದ್ಧನಿಗೆ ಐ ಲವ್ ಯೂ (I Love You) ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ವರ ಈ ವೃದ್ಧನೇ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಇದು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಅವರಿಬ್ಬರೂ ಸತಿ-ಪತಿಗಳು ಎಂಬುದಾಗಿ ಕಾಣಿಸಿಕೊಳ್ಳುತ್ತದೆ. ಸುಂದರವಾದ ವಧು ತನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕನಿಗೆ I Love You ಎಂದು ಹೇಳಿದಾಗ, ವೃದ್ಧ ಕೂಡ ಅವಳ ಕಡೆ ತಿರುಗಿ ಅದೇ ಮಾತನ್ನು ಹೇಳಿದ್ದಾನೆ. ಇದರಿಂದ ಅವರಿಬ್ಬರೂ ನಗುನಗುತ್ತಾ ತಮ್ಮ ದಾಂಪತ್ಯದಲ್ಲಿ ಸಂತಸದಿಂದಿರುವಂತೆ ಕಂಡುಬರುತ್ತಿದೆ.
ಐ ಲವ್ ಯೂ ಎಂದು ಹೇಳುತ್ತಾ ವಧು ವೃದ್ಧನ ಹಣೆಗೆ ಮುತ್ತಿಡುತ್ತಾಳೆ. ಇದನ್ನು ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ. ಈ ವೀಡಿಯೋವನ್ನು ಇದೀಗ ಎಡಿಟ್ ಮಾಡಲಾಗುತ್ತದೆ. ಒಂದು ವೀಡಿಯೋದಲ್ಲಿ ಯುವತಿ ವೃದ್ಧನಿಗೆ ಐ ಲವ್ ಯೂ ಹಣೆಗೆ ಮುತ್ತಿಡುತ್ತಿದ್ದಂತೆಯೇ ಅದಕ್ಕೆ, ವ್ಯಕ್ತಿಯೊಬ್ಬ ಓಡಿ ಹೋಗಿ ನೀರಿಗೆ ಧುಮುಕುವ ವೀಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಇದನ್ನೂ ಓದಿ: 55 ವರ್ಷದ ವ್ಯಕ್ತಿಯನ್ನು ವರಿಸಿದ 18ರ ಯುವತಿ- ಅಚ್ಚರಿ ಹುಟ್ಟಿಸುತ್ತೆ ಕಾರಣ
ಅಲ್ಲದೆ ವೀಡಿಯೋದ ಮೇಲೆ “ನಾನು ಒಬ್ಬಂಟಿಯಾಗಿದ್ದೇನೆ” ಎಂದು ಬರೆದುಕೊಳ್ಳಲಾಗಿದೆ. ಕಪಲ್ ಆಫೀಶಿಯಲ್ ಪೇಜ್ ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ಈ ವೀಡಿಯೋಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಮಲಗಲು ಮಂಚಕ್ಕೆ ಬಂಗಾರದ ಲೇಪನ ಮಾಡಿಸಿದ ಪತಿ ರವೀಂದರ್
