Sunday, 17th November 2019

Recent News

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಸೊಸೆ- ವಿಡಿಯೋ ವೈರಲ್

ಚಂಢೀಗಡ: ಅತ್ತೆಗೆ ಸೊಸೆಯೊಬ್ಬಳು ಹಿಗ್ಗಾಮುಗ್ಗ ಮನಬಂದತೆ ಥಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಈ ಘಟನೆ ಹರ್ಯಾಣದ ಮಹೇಂದ್ರಗಢ ಜಿಲ್ಲೆಯ ನಿವಾಝ್ ನಗರ್ ಎಂಬಲ್ಲಿ ನಡೆದಿದೆ. ಸೊಸೆ ತನ್ನ ಅತ್ತೆಗೆ ಥಳಿಸುವ ದೃಶ್ಯವನ್ನು ಪಕ್ಕದಮನೆಯಲ್ಲಿರುವ ಹುಡುಗಿಯೊಬ್ಬಳು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾಳೆ.

ವೃದ್ಧೆಗೆ ಥಳಿಸಿದ ಮಹಿಳೆಯ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ಕೂಡ ನಡೆಸಲಾಗಿದೆ ಎಂದು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರ ಗಮನಕ್ಕೆ ಬಂದಿದ್ದು, ಕೂಡಲೇ ವೃದ್ಧೆಯ ಮನೆಗೆ ತೆರಳಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ವೃದ್ಧೆಯನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಕಳುಹಿಸಿಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆಗೆ ಥಳಿಸುವ ವಿಡಿಯೋವನ್ನು ದೀಪಕರ್ ಭಾರದ್ವಾಜ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯನ್ನು ಅಪ್ಲೋಡ್ ಮಾಡಿಕೊಂಡು, ಈ ಘಟನೆ ನಮ್ಮ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಅನಾರೋಗ್ಯದಿಂದ ಬಳಲುತ್ತಿದ್ದು, ಯಾರ ಸಹಾಯವೂ ಇಲ್ಲದೆ ನಡೆಯಲು ಅಶಕ್ತರಾಗಿದ್ದಾರೆ. ಅಲ್ಲದೆ ಇವರು ದಿವಂಗತರಾಗಿರೋ ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯಾಗಿದ್ದಾರೆ. ದಯವಿಟ್ಟು ಆರೋಪಿ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡು, ಹರ್ಯಾಣ ಪೊಲೀಸರು, ಸಿಎಆಫ್ ಹರ್ಯಾಣ ಹಾಗೂ ಮನೋಹರ್ ಲಾಲ್ ಖಟ್ಟರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

Leave a Reply

Your email address will not be published. Required fields are marked *