ವಿಶೇಷ ವಿಡಿಯೋ ಹಾಕಿ ‘ಲಿಲ್ಲಿ’ಗೆ ವಿಜಯ್ ವಿಶ್

ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇಂದು ತಮ್ಮ 23ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ವಿಚಿತ್ರವಾಗಿ ವಿಶ್ ಮಾಡಿದ್ದಾರೆ.

ವಿಜಯ ದೇವರಕೊಂಡ ತಮ್ಮ ‘ಡಿಯರ್ ಕಾಮ್ರೆಡ್’ ಚಿತ್ರದ ಟೀಸರ್ ಹಾಸ್ಯವನ್ನಾಗಿ ಪರಿವರ್ತಿಸಿ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅವರು “ಹುಟ್ಟುಹಬ್ಬದ ಶುಭಾಶಯಗಳು ಲಿಲ್ಲಿ” ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಲಿಲ್ಲಿ ಎಂಬುದು ಡಿಯರ್ ಕಾಮ್ರೆಡ್‍ನಲ್ಲಿ ರಶ್ಮಿಕಾ ಪಾತ್ರದ ಹೆಸರು.

ವಿಜಯ್ ತಮ್ಮ ಮತ್ತೊಂದು ಟ್ವೀಟ್‍ನಲ್ಲಿ, “ಪ್ರೀತಿಯ ಲಿಲ್ಲಿ. ನಾವು ಸುಮ್ಮನೆ ತಮಾಷೆ ಮಾಡುದ್ದೇವೆ. ನಮ್ಮ ಮೇಲೆ ಬೇಸರ ಮಾಡಿಕೊಳ್ಳಬೇಡ. ಇಡೀ ಚಿತ್ರತಂಡಕ್ಕೆ ನೀನು ಸಂಭ್ರಮ. ನೀನು ನಿನ್ನ ಅಭಿನಯದಿಂದ ನಮ್ಮನ್ನು ಅಳಿಸಿದ್ದೀಯಾ ಹಾಗೂ ಇಡೀ ದಿನ ನಮ್ಮನ್ನು ನಗಿಸಿದ್ದೀಯಾ. ಈ ತಿಂಗಳ 8ರಂದು ಬೆಳಗ್ಗೆ 11.11ಕ್ಕೆ ಚಿತ್ರದ ಮೊದಲ ಹಾಡನ್ನು ನಿನಗೆ ಡೆಡಿಕೇಟ್ ಮಾಡುತ್ತೇವೆ” ಎಂದು ಡಿಯರ್ ಕಾಮ್ರೆಡ್ ಚಿತ್ರದ ರಶ್ಮಿಕಾ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

ಡಿಯರ್ ಕಾಮ್ರೆಡ್ ಚಿತ್ರ ಭರತ್ ಕಾಮಾ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದು, ಟೀಸರ್ ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ನೋಡಬಹುದು. ಈ ಚಿತ್ರದ ಮೇ 31ರಂದು ಬಿಡುಗಡೆ ಆಗಲಿದೆ.

Leave a Reply

Your email address will not be published. Required fields are marked *