ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿ ಗಿಫ್ಟ್ ಕೊಟ್ಟ ಪೊಲೀಸ್ – ವೀಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್

Advertisements

ನವದೆಹಲಿ: ಪೊಲೀಸ್‌ ಅಧಿಕಾರಿಯೊಬ್ಬರು ಬಂಡಿ ಎಳೆಯುವವನಿಗೆ ಹೊಸ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

Advertisements

ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಶಿವಂಗ್ ಶೇಖರ್ ಗೋಸ್ವಾಮಿ ಈ ಕ್ಲಿಪ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಬಂಡಿ ಎಳೆಯುವವನು ರಸ್ತೆಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುತ್ತಾನೆ. ಕೆಲವು ಸೆಕೆಂಡುಗಳ ನಂತರ, ಪೊಲೀಸ್ ಅಧಿಕಾರಿಯೊಬ್ಬರು ಆ ವ್ಯಕ್ತಿಗೆ ಹೊಸ ಚಪ್ಪಲಿಗಳನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಟ್ರೈನಿ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – IAS ಅಧಿಕಾರಿ ವಶ 

Advertisements

ವೀಡಿಯೋ ಕೊನೆಯಲ್ಲಿ, ಬಂಡಿ ಎಳೆಯುವವನು ಚಪ್ಪಲಿಯನ್ನು ಹಾಕಿಕೊಂಡು ಪೊಲೀಸ್‍ಗೆ ಧನ್ಯವಾದ ಹೇಳುತ್ತಾನೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ‘ತುಂಬಾ ಒಳ್ಳೆಯ ಕೆಲಸ,’ ‘ಪೊಲೀಸ್‍ಗೆ ವಂದನೆಗಳು’, ‘ಮಾನುಕುಲಕ್ಕೆ ಸೇವೆ ಸಲ್ಲಿಸುವುದು ಶ್ರೇಷ್ಠವಾಗಿದೆ’, ‘ಗ್ರೇಟ್ ಹ್ಯುಮಾನಿಟಿ ಸರ್. ನಿನಗೆ ನಮಸ್ಕಾರ’ ಎಂದು ಕಾಮೆಂಟ್‍ಗಳ ಸುರಿಮಳೆಯೇ ಬರುತ್ತಿದೆ. ಇನ್ನೂ ಕೆಲವರು ಹಾರ್ಟ್ ಎಮೋಜಿಗಳನ್ನು ಕಾಮೆಂಟ್ ಮಾಡಿದ್ದು, ಪೊಲೀಸ್ ಅಧಿಕಾರಿಯ ಔದಾರ್ಯಯನ್ನು ಹೊಗಳಿದ್ದಾರೆ.

Advertisements

ಈ ವೀಡಿಯೋ ಟ್ವಿಟ್ಟರ್‌ನಲ್ಲಿ 2,57,000ಕ್ಕೂ ಹೆಚ್ಚು ವ್ಯೂ ಮತ್ತು 17,000ಕ್ಕೂ ಹೆಚ್ಚು ಲೈಕ್‌ಗಳಿಸಿವೆ.

Live Tv

Advertisements
Exit mobile version