Saturday, 17th August 2019

ನಿಜವಾಗಿ ಧೋನಿಯ ರನೌಟ್ ಆಗಿದ್ರಾ – ಪಂದ್ಯಕ್ಕೆ ತಿರುವು ಕೊಟ್ಟ 2 ನಿಮಿಷದ ವಿಡಿಯೋ ನೋಡಿ

ಹೈದಾರಬಾದ್: ಮುಂಬೈ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ರನೌಟ್ ಆಗದೇ ಇದ್ದರೆ ಚೆನ್ನೈ ಚಾಂಪಿಯನ್ ಆಗಿ ಹೊರ ಹೊಮ್ಮುತಿತ್ತಾ ಎನ್ನುವ ಚರ್ಚೆ ಈಗ ಜೋರಾಗಿದೆ.

ಹೌದು. 12.3ನೇ ಓವರ್ ನಲ್ಲಿ ಚೆನ್ನೈ ತಂಡ 3 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿ ಸುಭದ್ರವಾಗಿತ್ತು. ಹಾರ್ದಿಕ್ ಪಾಂಡ್ಯ ಎಸೆದ 13ನೇ ಓವರಿನ 4 ಎಸೆತವನ್ನು ವಾಟ್ಸನ್ ಎಡಗಡೆ ಹೊಡೆದು ಸಿಂಗಲ್ ರನ್ ಓಡಿದರು. ಈ ವೇಳೆ ಮಾಲಿಂಗ ಸರಿಯಾಗಿ ಪಾಂಡ್ಯ ಅವರ ಕೈಗೆ ಥ್ರೋ ಮಾಡದ ಕಾರಣ ಧೋನಿ ಮತ್ತೊಂದು ರನ್ ಗಾಗಿ ಓಡಿದರು.

ಈ ಸಂದರ್ಭದಲ್ಲಿ ಬಾಲ್ ಮಿಡ್ ಆಫ್ ನಲ್ಲಿ ಫೀಲ್ಡ್ ಮಾಡುತ್ತಿದ್ದ ಇಶಾನ್ ಕಿಶನ್ ಕೈ ಸೇರಿತ್ತು. ಕೂಡಲೇ ಅವರು ನೇರವಾಗಿ ವಿಕೆಟ್‍ಗೆ ಥ್ರೋ ಮಾಡಿ ಬೇಲ್ಸ್ ಹಾರಿಸಿದರು. ಬಹಳ ಕಷ್ಟದ ತೀರ್ಮಾನ ಮೂರನೇ ಅಂಪೈರ್ ನಿಗೆಲ್ ಲಾಂಗ್ ಹಲವು ಕೋನಗಳಿಂದ ಪರಿಶೀಲಿಸಿ ಕೊನೆಗೆ 2 ರನ್ ಗಳಿಸಿದ್ದ ಧೋನಿ ಔಟ್ ಎಂದು ತೀರ್ಪು ನೀಡಿದರು.

ಬ್ಯಾಟ್ ಮೂಲಕ ಕ್ರೀಸ್ ಮುಟ್ಟುತ್ತಿದ್ದಾಗ ವಿಕೆಟಿನಲ್ಲಿರುವ ದೀಪ ಮೊಳಗಿದ ಹಿನ್ನೆಲೆಯಲ್ಲಿ ಈ ತೀರ್ಪಿನ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಧೋನಿ ಔಟ್ ಆಗದೇ ಇದ್ದರೂ ಮೂರನೇ ಅಂಪೈರ್ ತಪ್ಪು ನಿರ್ಧಾರ ಪ್ರಕಟಿಸಿದ್ದಾರೆ ಎಂದು ಧೋನಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ವೀಕ್ಷಕ ವಿವರಣೆಗಾರರು ಟಿವಿ ರಿಪ್ಲೇ ಪ್ರಸಾರಗೊಂಡ ಆರಂಭದಲ್ಲಿ ಧೋನಿ ಸೇಫ್ ಎಂದೇ ಹೇಳಿದ್ದರು. ನಂತರ ಇದು ಬಹಳ ಕ್ಲಿಷ್ಟಕರ ಸನ್ನಿವೇಶ. ಇಡೀ ಫಲಿತಾಂಶವನ್ನು ಬದಲಾಯಿಸಬಲ್ಲ ತೀರ್ಪು ಇದಾಗಬಹುದು ಎಂದು ಊಹಿಸಿದ್ದರು. ಹೀಗಾಗಿ ಈ ತೀರ್ಪು ಪ್ರಕಟಿಸಲು ಅಂಪೈರ್ 2 ನಿಮಿಷ ತೆಗೆದುಕೊಂಡು ಅಂತಿಮವಾಗಿ ಔಟ್ ಎಂದು ಪ್ರಕಟಿಸಿದರು.

ಒಂದು ವೇಳೆ ಧೋನಿ ಔಟಾಗದೇ ಇದ್ದರೆ ಪಂದ್ಯದ ಫಲಿತಾಂಶವೇ ಬದಲಾಗುತಿತ್ತು. ಈ ಬಾರಿ ಧೋನಿ ಅದೃಷ್ಟ ಕೈ ಕೊಟ್ಟಿತ್ತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಕೆಲವರು ಅಂಪೈರ್ ಸಹಾಯದಿಂದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿದೆ ಎಂದು ಬರೆದು ನಿಗೆಲ್ ಲಾಂಗ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *