Thursday, 19th September 2019

Recent News

ಸಲ್ಮಾನ್ ಮನೆಯಲ್ಲಿ ಗಣೇಶ ಹಬ್ಬದಂದು ಎಡವಟ್ಟು ಮಾಡಿ ಟ್ರೋಲ್ ಆದ ಕತ್ರಿನಾ ಕೈಫ್: ವಿಡಿಯೋ

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದರು. ಈ ವೇಳೆ ಕತ್ರಿನಾ ಕೈಫ್, ಸಲ್ಮಾನ್ ಮನೆಯಲ್ಲಿ ಎಡವಟ್ಟು ಮಾಡಿ ಟ್ರೋಲ್ ಆಗುತ್ತಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಕೂಡ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಅದ್ಧೂರಿಯಾಗಿ ಮಾಡಿದರು. ಈ ವೇಳೆ ಸಲ್ಮಾನ್ ಮನೆಯಲ್ಲಿ ಹಲವು ಬಾಲಿವುಡ್ ನಟರು ಭಾಗಿಯಾಗಿದ್ದರು. ಸಲ್ಮಾನ್ ಖಾನ್ ಕುಟುಂಬದ ಜೊತೆ ಕತ್ರಿನಾ ಕೈಫ್ ಕೂಡ ಗಣೇಶನ ಪೂಜೆಯಲ್ಲಿ ಭಾಗಿಯಾಗಿದ್ದರು.

ಸಲ್ಮಾನ್ ಖಾನ್ ಮನೆಯಲ್ಲಿ ಒಬ್ಬಬ್ಬರಾಗಿ ಗಣೇಶನಿಗೆ ಪೂಜೆ ಮಾಡುತ್ತಿದ್ದರು. ಇದೇ ವೇಳೆ ಕತ್ರಿನಾ ಗಣೇಶನ ಮೂರ್ತಿಗೆ ಉಲ್ಟಾ ಪೂಜೆ ಮಾಡಿದ್ದಾರೆ. ಸದ್ಯ ಇದನ್ನು ನೋಡಿದ ಅಭಿಮಾನಿಗಳು ಕತ್ರಿನಾ ಕೈಫ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶನಿಗೆ ಪೂಜೆ ಮಾಡುತ್ತಿರುವ ವಿಡಿಯೋವನ್ನು ನಟ, ನಿರ್ಮಾಪಕ, ನಿರ್ದೇಶಕರಾದ ಅತುಲ್ ಅಗ್ನಿಹೋತ್ರಿ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕತ್ರಿನಾ ಉಲ್ಟಾ ಆರತಿ ಮಾಡುತ್ತಿರುವುದು ಕಂಡು ಬಂದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಕತ್ರಿನಾ ಗಣೇಶನಿಗೆ ಉಲ್ಟಾ ಆರತಿ ಮಾಡುತ್ತಿದ್ದಾಗ ಸಲ್ಮಾನ್ ಕುಟುಂಬದವರು ಎಲ್ಲರೂ ಅಲ್ಲಿಯೇ ಇದ್ದರು. ಆದರೆ ಯಾರೂ ಕತ್ರಿನಾ ಅವರನ್ನು ತಡೆದು ಸರಿಯಾಗಿ ಆರತಿ ಮಾಡುವಂತೆ ಹೇಳಲಿಲ್ಲ.

ಸದ್ಯ ಈ ವಿಡಿಯೋ ನೋಡಿ ಕೆಲವರು, “ಅಯ್ಯೋ, ಕತ್ರಿನಾಗೆ ಆರತಿ ಮಾಡಲು ಬರುವುದ್ದಿಲ್ಲ. ಯಾರಾದರೂ ಆಕೆಗೆ ಆರತಿ ಮಾಡುವುದನ್ನು ಕಲಿಸಿಕೊಡಿ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಕತ್ರಿನಾ ನಿನಗೆ ಆರತಿ ಮಾಡಲು ಬರದಿದ್ದಾಗ ನಿನಗೆ ಆರತಿ ಮಾಡು ಎಂದು ಹೇಳಿದವರಾರು?” ಎಂದು ಪ್ರಶ್ನೆ ಮಾಡಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *