Sunday, 24th March 2019

Recent News

ಹುಡ್ಗಿ ಮುಂದೆ ಗನ್ ತೆಗೆದು ಶೋ ಕೊಟ್ಟ ಮಾಜಿ ಸಂಸದನ ಪುತ್ರ- ವಿಡಿಯೋ ವೈರಲ್

ನವದೆಹಲಿ: ಕ್ಷುಲ್ಲಕ ವಿಚಾರಕ್ಕೆ ಬಿಎಸ್‍ಪಿ ಮಾಜಿ ಸಂಸದರ ಪುತ್ರನೊಬ್ಬ ಯುವತಿಗೆ ಗನ್ ತೋರಿಸಿ ಆತಂಕ ಸೃಷ್ಟಿಸಿದ ಘಟನೆ ರಾಷ್ಟ್ರ ರಾಜಧಾನಿ ದಕ್ಷಿಣ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಮಾಜಿ ಬಿಎಸ್‍ಪಿ ಸಂಸದ ರಾಕೇಶ್ ಪಾಂಡೆ ಪುತ್ರ ಆಶಿಶ್ ಪಾಂಡೆ ಯುವತಿಗೆ ಗನ್ ತೋರಿಸಿ ಬೆದರಿಸಿದ್ದಾನೆ. ಭಾನುವಾರ ರಾತ್ರಿ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಬಳಿ ಕಾರ್ ಪಾರ್ಕಿಂಗ್ ವಿಚಾರವಾಗಿ ಯುವ ಜೋಡಿ ಹಾಗೂ ಆಶಿಶ್ ಪಾಂಡೆ ನಡುವೆ ಜಗಳ ಏರ್ಪಟಿತ್ತು. ಈ ವೇಳೆ ಸಿಟ್ಟಿಗೆದ್ದ ಮಾಜಿ ಸಂಸದರ ಪುತ್ರ ಏಕಾಏಕಿ ತಮ್ಮ ಬಳಿಯಿದ್ದ ಗನ್ ತೆಗೆದು ಯುವತಿ ಹಾಗೂ ಆತನ ಪ್ರಿಯಕರನಿಗೆ ಬೆದರಿಸಿದ್ದಾನೆ.

ಆಶಿಶ್ ಗನ್ ತೆಗೆದು ರಂಪಾಟ ನಡೆಸುತ್ತಿದ್ದನ್ನು ಕಂಡ ಹೋಟೆಲ್‍ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಹೋಟೆಲ್ ಸಿಬ್ಬಂದಿ ತಕ್ಷಣ ಎಚ್ಚತ್ತುಕೊಂಡಿದ್ದರಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ. ಅಲ್ಲದೇ ಆಶಿಶ್ ಪಾಂಡೆ ಗನ್ ಹಿಡಿದು ಪುಂಡಾಟ ಮೆರೆದ 1 ನಿಮಿಷಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ವಿಡಿಯೋ ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತಾ ದೆಹಲಿ ಪೊಲೀಸರು, ಸಾರ್ವಜನಿಕ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತೋರಿ ದರ್ಪ ಮೆರೆದ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *