Connect with us

ಕೊರೊನಾ ರೋಗಿಗೆ ಕಿರುಕುಳ- ಇಬ್ಬರು ವಾರ್ಡ್ ಬಾಯ್‍ಗಳ ಬಂಧನ

ಕೊರೊನಾ ರೋಗಿಗೆ ಕಿರುಕುಳ- ಇಬ್ಬರು ವಾರ್ಡ್ ಬಾಯ್‍ಗಳ ಬಂಧನ

ಭೋಪಾಲ್: ಕೊರೊನಾ ಸೋಂಕಿತೆಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿಇಂಧೋರ್ ಮಹಾರಾಜ್ ಯಶವಂತರಾವ್ ಆಸ್ಪತ್ರೆಯ ಇಬ್ಬರು ವಾರ್ಡ್ ಬಾಯ್‍ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶುಭಂ ಮತ್ತು ಹೃದಯೇಶ್ ಬಂಧಿತ ಆರೋಪಿಗಳಾಗಿದ್ಧಾರೆ. ಆಸ್ಪತ್ರೆಯ ಕೋವಿಡ್ ವಾರ್ಡ್ ವಿಭಾಗದಲ್ಲಿ ಕೊರೊನಾ ರೋಗಿಗೆ ಕಿರುಕುಳ ನೀಡಿದ್ದಾರೆ. ಮೇ 5 ಮತ್ತು ಮೇ 6ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಇಂದೋರ್‍ನ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಾಗ್ರಿ ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದಳು. ಆ ವೇಳೆ ಇಬ್ಬರೂ ಆರೋಪಿಗಳು ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಸನ್ಯೋಗಿತಗಂಜ್ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ವಾರ್ಡ್ ಹುಡುಗರು ಕ್ರಿಮಿನಲ್ ದಾಖಲೆ ಹೊಂದಿದ್ದಾರೋ ಇಲ್ಲವೋ ಎಂದು ತನಿಖೆ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

Advertisement
Advertisement