Wednesday, 26th June 2019

Recent News

2005ರಿಂದ ನಾಪತ್ತೆಯಾಗಿದ್ದ ಉಗ್ರ ಕೊನೆಗೂ ಪೊಲೀಸರ ಬಲೆಗೆ ಬಿದ್ದ

ನವದೆಹಲಿ: 2005ರಿಂದ ಕಣ್ತಪ್ಪಿಸಿ ಓಡಾಡುತ್ತಿದ್ದ ಜೈಷ್-ಈ-ಮೊಹಮದ್ ಉಗ್ರ ಸಂಘಟನೆಯ ಉಗ್ರನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಿದೆ.

ಫಯಾಜ್ ಅಹ್ಮದ್ ಲೋನ್ ಬಂಧಿತ ಉಗ್ರ. 2005ರಿಂದಲೂ ಈ ಉಗ್ರನಿಗಾಗಿ ದೆಹಲಿ ಪೊಲೀಸರು ಬಲೆ ಬೀಸಿದ್ದರು. ಆದ್ರೆ ಈತ ಮಾತ್ರ ಪೊಲೀಸರ ಕಣ್ತಪ್ಪಿಸಿ ನಾಪತ್ತೆಯಾಗಿದ್ದ. ಆದರಿಂದ ಈತನನ್ನು ಹುಡುಕಿ ಕೊಟ್ಟವರಿಗೆ ಪೊಲೀಸ್ ಇಲಾಖೆಯಿಂದ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು.

ಈಗಾಗಲೇ ಫಯಾಜ್ ಅಹ್ಮದ್ ಲೋನ್ ವಿರುದ್ಧ ಜಾಮೀನುರಹಿತ ವಾರೆಂಟ್ ಅನ್ನು ಪೊಲೀಸರು ನೀಡಿದ್ದಾರೆ. ಈ ಹಿಂದೆ ಮಾರ್ಚ್ 21ರಂದು ಪುಲ್ವಾಮಾ ದಾಳಿಯ ಮುಖ್ಯ ಆರೋಪಿ ಮುದಸೀರ್ ಅಹ್ಮದ್ ಖಾನ್ ಜೊತೆ ಕೈಜೊಡಿಸಿದ್ದ ಉಗ್ರ ಸಜ್ಜಿದ್ ಖಾನ್‍ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ದೆಹಲಿ ಕೆಂಪು ಕೋಟೆಯ ಪ್ರದೇಶದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರು ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *