Thursday, 16th August 2018

Recent News

ಭಾರೀ ಮಳೆಗೆ ತಡರಾತ್ರಿ ತಡೆಗೋಡೆ ಕುಸಿತ- 5 ಲಕ್ಷ ನಷ್ಟ, ಆತಂಕಕ್ಕೀಡಾದ ಕುಟುಂಬ

ಮಡಿಕೇರಿ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯ ಮಡಿಕೇರಿಯ ಸುಬ್ರಮಣ್ಯ ನಗರದ 14ನೇ ಬ್ಲಾಕ್ ನ ಮನೆಯೊಂದರ ತಡೆಗೋಡೆ ಕುಸಿದ ಘಟನೆ ನಡೆದಿದೆ.

ನಿನ್ನೆ ಮಧ್ಯರಾತ್ರಿ 1.30ರ ಸುಮಾರಿಗೆ ಪರಮೇಶ್ವರ್ ಎಂಬವರಿಗೆ ಸೇರಿದ ಮನೆಯ ತಡೆಗೋಡೆ ಕುಸಿದು ಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮಂಗಳವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡು ಕುಸಿದಿದೆ. ಪರಿಣಾಮ ಸುಮಾರು 5 ಲಕ್ಷ ನಷ್ಟಗೊಂಡಿದೆ. 50 ಅಡಿ ಅಗಲ ಹಾಗೂ 18 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಇದರ ಪರಿಣಾಮ ಪಕ್ಕದ ಮನೆಗೂ ಹಾನಿ ಉಂಟಾಗಿದೆ.

ಘಟನೆಯಿಂದಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ನಗರಸಭೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *