ಹೊಸ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೊಹ್ಲಿ – T20 ವಿಶ್ವಕಪ್‍ಗೆ ನ್ಯೂಲುಕ್

Advertisements

ಮುಂಬೈ: ಟೀಂ ಇಂಡಿಯಾದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಆಸ್ಟ್ರೇಲಿಯಾ (Australia) ಸರಣಿಗೂ ಮುನ್ನ ಮಾಡಿಕೊಂಡಿರುವ ಹೊಸ ಹೇರ್‌ಸ್ಟೈಲ್ (HairStyle)  ಸಖತ್ ಸದ್ದು ಮಾಡುತ್ತಿದೆ.

Advertisements

ಹೌದು ಕ್ರಿಕೆಟಿಗರು ಒಂದು ಸರಣಿಯ ಬಳಿಕ ಇನ್ನೊಂದು ಸರಣಿಗೂ ಮುನ್ನ ತಮ್ಮ ಹೊಸಲುಕ್‍ಗಳ ಮೂಲಕ ಅಭಿಮಾನಿಗಳ ಗಮನಸೆಳೆಯುವುದು ಸಾಮಾನ್ಯ. ಈ ಹಿಂದೆ ಕೂಡ ಇಂತಹ ಹಲವು ಟ್ರೆಂಡಿ ಆಟಗಾರರನ್ನು ಟೀಂ ಇಂಡಿಯಾ ಕಂಡಿದೆ. ಇದೀಗ ತಂಡದಲ್ಲಿರುವ ಕೊಹ್ಲಿ ತಮ್ಮ ವಿಭಿನ್ನ ಲುಕ್‍ಗಳ ಮೂಲಕ ಆಗಾಗ ಸುದ್ದಿಯಾಗುತ್ತಾರೆ. ಕೊಹ್ಲಿ ತವರಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಾಗಿ ಇದೀಗ ಮೊಹಾಲಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಈ ವೇಳೆ ಅವರ ಹೊಸ ಕೇಶವಿನ್ಯಾಸ ಗಮನಸೆಳೆದಿದೆ. ಇದನ್ನೂ ಓದಿ: ಶಮಿಗೆ ಕೊರೊನಾ: T20 ಸರಣಿಯಿಂದ ಔಟ್ – 3 ವರ್ಷಗಳ ಬಳಿಕ ಉಮೇಶ್ ಯಾದವ್ ಕಂಬ್ಯಾಕ್?

Advertisements

ಹೇರ್ ಸ್ಟೈಲಿಸ್ಟ್ ರಶೀದ್ ಸಲ್ಮಾನಿ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‍ನಲ್ಲಿ ವಿರಾಟ್ ಕೊಹ್ಲಿ ಜೊತೆ ಇರುವ ವೀಡಿಯೋವನ್ನು ಫೋಸ್ಟ್ ಮಾಡಿದ್ದಾರೆ. ಸಲ್ಮಾನಿ ಅವರು “ಕಿಂಗ್ ಕೊಹ್ಲಿಯ ಹೊಸ ನೋಟ” ಎಂದು ಬರೆದಿರುವ ಹೊಸ ಕೇಶವಿನ್ಯಾಸದ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಬಳಿಕ ಈ ಫೋಟೋಗಳು ವೈರಲ್ ಆಗ ತೊಡಗಿದೆ. ಅಭಿಮಾನಿಗಳು ಕೊಹ್ಲಿಯ ಹೊಸ ಕೇಶವಿನ್ಯಾಸಕ್ಕೆ ಫಿದಾ ಆಗಿದ್ದಾರೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲೂ ಇದೇ ಲುಕ್‍ನಲ್ಲಿ ಕೊಹ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ಕೊಹ್ಲಿಯನ್ನು ಆರಂಭಿಕನನ್ನಾಗಿ ಆಡಿಸಿ ತಲೆ ಇಲ್ಲದ ಕೆಲಸ ಮಾಡ್ಬೇಡಿ- ಗಂಭೀರ್ ಗರಂ

Advertisements

ಏಷ್ಯಾಕಪ್‍ಗೂ (Asia Cup 2022) ಮುನ್ನ ರನ್ ಬರ ಅನುಭವಿಸುತ್ತಿದ್ದ ಕೊಹ್ಲಿ ಏಷ್ಯಾಕಪ್‍ನಲ್ಲಿ ಭರ್ಜರಿ ಶತಕ ಸಿಡಿಸಿ ಕಂಬ್ಯಾಕ್ ಮಾಡಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ ಚೊಚ್ಚಲ ಶತಕ ಸಿಡಿಸಿದ ಕೊಹ್ಲಿ ಈ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 2 ವರ್ಷ, 9 ತಿಂಗಳು, 16 ದಿನಗಳ ಬಳಿಕ ಶತಕ ಸಿಡಿಸಿದರು. 1,021 ದಿನಗಳ ಬಳಿಕ ಕೊಹ್ಲಿ ಬ್ಯಾಟ್‍ನಿಂದ ಶತಕದ ವೈಭವ ಕಂಡುಬಂದಿದ್ದು, ಈ ಶತಕ ಕೊಹ್ಲಿಯ 71ನೇ ಅಂತಾರಾಷ್ಟ್ರೀಯ ಶತಕವಾಗಿ ರಾರಾಜಿಸಿದೆ. ಇದೀಗ ಆಸ್ಟ್ರೇಲಿಯಾ ವಿರುದ್ಧವು ಘರ್ಜಿಸಲು ಕೊಹ್ಲಿ ಪ್ಲಾನ್ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 20 ರಿಂದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ.

Live Tv

Advertisements
Exit mobile version