Connect with us

Latest

ಒಂದೇ ಆಟೋದಲ್ಲಿ 24 ಜನ ಪ್ರಯಾಣಿಕರು: ವಿಡಿಯೋ ವೈರಲ್

Published

on

– ಇದೊಂದು ವಿಶ್ವದಾಖಲೆ ಎಂದು ಟ್ರೋಲ್ ಮಾಡಿದ ನೆಟ್ಟಿನರು

ಹೈದರಾಬಾದ್: ಆಟೋವೊಂದರಲ್ಲಿ ಸಾಮಾನ್ಯವಾಗಿ 4 ರಿಂದ 7 ಜನರು ಪ್ರಯಾಣಿಸಬಹುದು. ಆದರೆ ಬರೋಬ್ಬರಿ 24 ಜನರು ಒಂದೇ ಆಟೋದಲ್ಲಿ ಪ್ರಾಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ತೆಲಂಗಾಣದ ಭೋಂಗೀರ್ ಪಟ್ಟಣದಲ್ಲಿ ಇಂತಹ ವಿಚಿತ್ರ ಪ್ರಸಂಗ ನಡೆದಿದ್ದು, ಟ್ವಿಟ್ಟರ್ ನಲ್ಲಿ ವಿಡಿಯೋ ಹರಿದಾಡುತ್ತಿದೆ. ಇದನ್ನು ನೋಡಿದ ನೆಟ್ಟಿಗರು, ಇದೊಂದು ವಿಶ್ವದಾಖಲೆ ಎಂದು ವ್ಯಂಗ್ಯವಾಡಿದ್ದಾರೆ. ಕೆಲವರು ತಮ್ಮ  ರೀತಿಯಲ್ಲಿ ರಿಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಈ ವಿಡಿಯೋವನ್ನು ಕರೀಮ್ ನಗರದ ಪೊಲೀಸ್ ಆಯುಕ್ತರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರಿಬಿಟ್ಟಿದ್ದು, ಜನರು ತಮ್ಮ ಸುರಕ್ಷತೆ ಬಗ್ಗೆ ತಾವೇ ಎಚ್ಚರಿಕೆ ವಹಿಸಬೇಕು. ಪ್ರಯಾಣಿಕರ ಆಟೋಗಳಲ್ಲಿ ಅಗತ್ಯಕ್ಕಿತ ಹೆಚ್ಚಿನ ಮಂದಿ ಕೂರಬಾರದು. ಇದರಿಂದ ನಿಮ್ಮ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?:
ಪೊಲೀಸರು ಆಟೋವೊಂದನ್ನು ತಡೆದು ಏನಪ್ಪ ನಿನ್ನ ಹೆಸರು ಎಂದು ಚಾಲಕನನ್ನು ಕೇಳುತ್ತಾರೆ. ಆಗ ಚಾಲಕ ಕರೀಂ ಸರ್ ಎಂದು ಉತ್ತರಿಸುತ್ತಾನೆ. ಆಗ ಪೊಲೀಸರು ಆಟೋದಲ್ಲಿ ಇರುವವರನ್ನು ಕೆಳಗೆ ಇಳಿಯುವಂತೆ ಸೂಚನೆ ನೀಡುತ್ತಾರೆ. ಆಟೋದಿಂದ ಕೆಳಗೆ ಇಳಿದವರನ್ನು ಏಣಿಕೆ ಮಾಡಿದ ಪೊಲೀಸರು ದಂಗಾಗುತ್ತಾರೆ. ಏಕೆಂದರೆ ಒಂದೇ ಆಟೋದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 24 ಜನರು ಇದ್ದರು.