Connect with us

Bollywood

ಸೆಕ್ಯೂರಿಟಿ ಕಪಾಳಕ್ಕೆ ಬಾರಿಸಿದ ಸಲ್ಮಾನ್ ಖಾನ್: ವಿಡಿಯೋ ನೋಡಿ

Published

on

ಮುಂಬೈ: ಮಕ್ಕಳ ಜೊತೆ ಗರಂ ಆಗಿ ವರ್ತಿಸಿದ್ದಕ್ಕೆ ತನ್ನ ಸೆಕ್ಯೂರಿಟಿ ಕಪಾಳಕ್ಕೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಬಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಗಳವಾರ ರಾತ್ರಿ ಸಲ್ಮಾನ್ ತಾವು ನಟಿಸಿದ ‘ಭಾರತ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‍ಗೆ ಹೋಗಿದ್ದರು. ಹೀಗಾಗಿ ಸಲ್ಮಾನ್‍ಗಾಗಿ ಸೆಕ್ಯೂರಿಟಿ ಗಾರ್ಡ್ ದಾರಿ ಮಾಡಿಕೊಡುತ್ತಿದ್ದರು. ಈ ವೇಳೆ ಮಕ್ಕಳ ಜೊತೆ ಖಾರವಾಗಿ ವರ್ತಿಸಿದ್ದಕ್ಕೆ ಸಲ್ಮಾನ್ ಖಾನ್ ಸೆಕ್ಯೂರಿಟಿಯ ಕಪಾಳಕ್ಕೆ ಹೊಡೆದಿದ್ದಾರೆ.

ಸಲ್ಮಾನ್ ಖಾನ್ ಸೆಕ್ಯೂರಿಟಿಗೆ ಹೊಡೆದ ಫೋಟೋ ಮೊದಲು ಪೀಪಿಂಗ್ ಮೂನ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈಗ ಈ ವಿಡಿಯೋ ವೈರಲ್ ಆಗಿದ್ದು, ಕೆಲವರು ಸಲ್ಮಾನ್ ಪರವಾಗಿ ಮಾತನಾಡಿದ್ದರೆ, ಮತ್ತೆ ಕೆಲಸವರು ಅವರ ವಿರುದ್ಧವಾಗಿ ಮಾತನಾಡಿದ್ದಾರೆ.

ಮಕ್ಕಳು ಹಾಗೂ ಮಹಿಳೆಯರಿಗೆ ಯಾರಾದರೂ ಕಿರುಕುಳ ನೀಡಿದರೆ ಸಲ್ಮಾನ್ ಅವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ರೆ, ಮತ್ತೆ ಕೆಲವರು ಸೆಕ್ಯೂರಿಟಿ ತನ್ನ ಕೆಲಸವನ್ನು ಮಾಡುತ್ತಿದ್ದರು. ಅವರಿಗೆ ಹೊಡೆಯುವ ಬದಲು ಎಚ್ಚರಿಕೆ ನೀಡಬಹುದು ಎಂದು ಕಮೆಂಟ್ ಮಾಡಿದ್ದಾರೆ.

ಸಲ್ಮಾನ್ ಈ ರೀತಿ ಕೋಪಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಸಲ್ಮಾನ್ ಮುಂಬೈನಲ್ಲಿ ಸೈಕಲ್‍ನಲ್ಲಿ ಹೋಗುತ್ತಿರುವಾಗ ಪತ್ರಕರ್ತನೊಬ್ಬ, ನಟ ನಿರಾಕರಿಸಿದರೂ ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಸಲ್ಮಾನ್ ಪತ್ರಕರ್ತನ ಮೊಬೈಲ್ ಕಸಿದಿದ್ದರು. ಈ ಕಾರಣಕ್ಕಾಗಿ ಪತ್ರಕರ್ತ ಸಲ್ಮಾನ್ ಅವರ ವಿರುದ್ಧ ದೂರು ದಾಖಲಿಸಿದ್ದರು.