Connect with us

Districts

ಕೋವಿಡ್ ಮುಕ್ತ ಗ್ರಾಮ ಮಾಡಲು ಗ್ರಾಮ ಪಂಚಾಯತಿಯೊಂದಿಗೆ ಕೈ ಜೋಡಿಸಿದ ಗ್ರಾಮಸ್ಥರು

Published

on

ಮಡಿಕೇರಿ: ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿರುತ್ತಿರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೋರ ಬರಲು ಭಯಪಡುವ ಪರಿಸ್ಥಿತಿ ಕೊಡಗು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲದೇ ಇಂದು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು 532 ಹಾಗೂ 8 ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಜನರು ಅತಂಕದಲ್ಲಿ ಇದ್ದಾರೆ.ಈ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಗ್ರಾಮಪಂಚಾಯತಿ ಗ್ರಾಮಸ್ಥರು ಊರಿಂದ ಯಾರು ಹೋರಗೆ ಹೋಗಬರದು ಹೊರಗಿನಿಂದ ಗ್ರಾಮಕ್ಕೆ ಬರಬಾರದು ಎಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಹಾಕತ್ತೂರು ಗ್ರಾಮ ಪಂಚಾಯಿತಿಯ ಸದಸ್ಯರು. ಈ ನಿರ್ಣಯ ಮಾಡಿದ್ದಾರೆ. ಯಾರು ಕೂಡ ಗ್ರಾಮದಿಂದ ಕೆಲಸಕ್ಕೆ ನಮ್ಮ ಊರಿನಿಂದ ಹೊರಗಡೆ ಹೋಗಬಾರದು. ಮಾಸ್ಕ ಧರಿಸಿದರೆ ಹೊರಗಡೆ ಬಂದಲ್ಲಿ 100ರೂ ದಂಡ ಹಾಗೂ ಅಂಗಡಿ ಹೋಟೆಲಿನಲ್ಲಿ ಟೀ ತಿಂಡಿ ಕೊಡಬಾರದು. ಎಲ್ಲ ಅಂಗಡಿಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ವ್ಯವಸ್ಥೆ ಇರಬೇಕು. ಸಾಮಾಜಿಕ ಅಂತರ ಕಾಪಾಡದೆ ಇದ್ದಲ್ಲಿ ದಂಡ ವಿಧಿಸಲಾಗುವುದು. ಹೊರಗಡೆಯಿಂದ ಮೀನಿನ ವಾಹನ ಮತ್ತು ತರಕರಿ ವಾಹನ ಬರೋದನ್ನು ಗ್ರಾಮದ ಒಳಗೆ ನಿಷೇಧಿಸಲಾಗಿದೆ.

ಅಷ್ಟೇ ಅಲ್ಲದೆ ಹೊರ ಜಿಲ್ಲೆ ಹೊರರಾಜ್ಯದಿಂದ ವಿದೇಶದಿಂದ ಬಂದವರು ಹತ್ತು ದಿನ ಮನೆಯವರೆಲ್ಲ ಕಡ್ಡಾಯವಾಗಿ ಕ್ವಾರಂಟೈನ್‍ನಲ್ಲಿರಬೇಕು. ಕ್ವಾರಂಟೈನ್‍ನಲ್ಲಿದ್ದವರು ಮನೆಯಿಂದ ಹೊರಗೆ ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಅಂಗಡಿಗಳಲ್ಲಿ ವ್ಯಾಪರ ಮಾಡಿಕೊಳ್ಳಬೇಕು ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಮಾಸ್ಕ ಧರಿಸದೆ ಹೊರಗಡೆ ಇದ್ದಲ್ಲಿ ಫೋಟೋ ತೆಗೆದು ಗ್ರಾಮ ಪಂಚಾಯತಿ ವಾಟ್ಸ್ ಆಪ್ ನಂಬರ್ ಕಳಿಸಿದ್ದಾರೆ. ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು. ನಿಮ್ಮ ಕುಟುಂಬದ ಸುರಕ್ಷತೆ ನಿಮ್ಮ ಕೈಯಲ್ಲಿದೆ ಊರಿನ ಸುರಕ್ಷತೆ ನಿಮ್ಮ ಕೈಯಲ್ಲಿದೆ. ನೀವು ಎಚ್ಚೆತ್ತುಕೊಂಡಿಲ್ಲದಲ್ಲಿ ನಿಮ್ಮ ಮನೆಯ ಬಾಗಿಲಿಗೆ ಬಂದ ಮೇಲೆ ಎಚ್ಚೆತ್ತುಕೊಂಡು ಪ್ರಯೋಜನವಿಲ್ಲ ಹೀಗೆಂದು ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಜನರಿಗೆ ಮನವರಿಕೆ ಮಾಡಿದ್ದಾರೆ.

ಗ್ರಾಮಸ್ಥರು ಪಂಚಾಯಿತಿಗೆ ಸಹಕಾರ ನೀಡಿ ಕೊರೊನಾ ಮುಕ್ತ ಗ್ರಾಮಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಗ್ರಾಮದಿಂದ ಕಾಫಿ ತೋಟದ ಕೆಲಸಗಳಿಗೆ ನೂರಾರು ಜನರು ಹೋರಗೆ ಹೋಗಿ ದುಡಿದು ಬರುತ್ತಿದೇವು. ಹೆಚ್ಚು ಬಡ ವರ್ಗದ ಜನರು ಈ ಗ್ರಾಮದಲ್ಲಿ ನೆಲೆಸಿದ್ದಾರೆ. ಅದರೆ ಕೋವಿಡ್ ಪ್ರಕರಣಗಳು ಕಡಿಮೆ ಅಗುವವರೆಗೂ ಊರಿನಿಂದ ಹೋರ ಹೋಗುವುದಿಲ್ಲ ಉಪವಾಸ ಇರುತ್ತೇವೆ. ಅದರೆ ರೋಗ ನಮ್ಮ ಊರಿನ ಒಳಗೆ ಬರಲು ಬಿಡುವುದಿಲ್ಲ. ಹೀಗಾಗಿ ಗ್ರಾಮದ ಎಲ್ಲಾ ಜನರು ಪಂಚಾಯಿತಿಯ ಕಾರ್ಯಕ್ಕೆ ಕೈಯಿ ಜೋಡಿಸುತ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮಾಹಾಮಾರಿ ತಡೆಯಲು ಗ್ರಾಮಸ್ಥರು ಮನಸ್ಸು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *