Connect with us

ಒಂದೇ ದಿನ ಮಂಡ್ಯದ ಗ್ರಾಮವೊಂದರ 25 ಮಂದಿಗೆ ಕೊರೊನಾ ದೃಢ

ಒಂದೇ ದಿನ ಮಂಡ್ಯದ ಗ್ರಾಮವೊಂದರ 25 ಮಂದಿಗೆ ಕೊರೊನಾ ದೃಢ

ಮಂಡ್ಯ: ಜಿಲ್ಲೆಯ ಪಾಂಡಪುರ ತಾಲೂಕಿನ ಎರೇಗೌಡನಕೊಪ್ಪಲು ಗ್ರಾಮದ 25 ಮಂದಿಗೆ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿದ್ದು ಇದರಿಂದ ಗ್ರಾಮದ ಜನರಲ್ಲಿ ಆತಂಕ ಎದುರಾಗಿದೆ.

ಎರೇಗೌಡನಕೊಪ್ಪಲು ಗ್ರಾಮದ ಜನರಿಗೆ ಕಳೆದ ಎರಡು ಮೂರು ದಿನಗಳಿಂದ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಹೀಗಾಗಿ ಗ್ರಾಮದ 30 ಮಂದಿ ಸ್ಥಳೀಯ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. ಇದೀಗ 30 ಮಂದಿಯ ಪೈಕಿ 25 ಮಂದಿಗೆ ಕೊರೊನಾ ದೃಢಪಟ್ಟಿದೆ. ಸುಮಾರು 500 ಮಂದಿ ಇರುವ ಈ ಗ್ರಾಮದಲ್ಲಿ 25 ಮಂದಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ

ಗ್ರಾಮದಲ್ಲಿ 25 ಮಂದಿಗೆ ಕೊರೊನಾ ದೃಢಪಟ್ಟಿರುವ ಮಾಹಿತಿ ತಿಳಿದ ಶಾಸಕ ಪುಟ್ಟರಾಜು ಹಾಗೂ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಯಾರು ಕೂಡ ಭಯ ಭೀತರಾಗಬೇಡಿ, ಎಲ್ಲರೂ ಮನೆಯಲ್ಲಿ ಇರಿ, ಕೊರೊನಾ ನಿಯಮಗಳನ್ನು ಪಾಲಿಸಿ. ಪಾಸಿಟಿವ್ ಬಂದಿರುವವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ. ಇದಲ್ಲದೇ ಈ ವೇಳೆ ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement
Advertisement