Crime
ಲಾರಿ ಹರಿದು ಯುವಕ ಸಾವು – ಸಿಸಿಟಿವಿಯಲ್ಲಿ ಅಪಘಾತ ದೃಶ್ಯ ಸೆರೆ

– ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಸಾವು
– 4 ತಿಂಗಳ ಹಿಂದೆ ಮದುವೆಯಾಗಿದ್ದ ಯುವಕ
ವಿಜಯಪುರ: ಬೈಕ್ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಭಯಾನಕ ಘಟನೆ ವಿಜಯಪುರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತನನ್ನು ಶಶಿಧರ್ ಕಮತಗಿ (30) ಎಂದು ಗುರುತಿಸಲಾಗಿದೆ. ವಿಜಯಪುರ ತಾಲೂಕಿನ ಮಧಬಾವಿ ನಿವಾಸಿಯಾಗಿದ್ದಾರೆ. ಲಾರಿ ಹರಿದು ಶಶಿಧರ್ ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿನ್ನೆ ಸಂಜೆ ನಡೆದಿದೆ.
ವಿಜಯಪುರ ಇಂಡಸ್ಟ್ರಿಯಲ್ ಏರಿಯಾದಲ್ಲಿ ಶಶಿಧರ್ ಕೆಲಸ ಮಾಡುತ್ತಿದ್ದರು. ಪ್ರತಿದಿನ ಬೈಕ್ ಮೇಲೆ ಮಧಬಾವಿ ಗ್ರಾಮಕ್ಕೆ ಹೋಗಿ ಬರ್ತಿದ್ದರು. ಹಾಗೇ ನಿನ್ನೆ ಸಂಜೆ ವೇಳೆಗೆ ಶಶಿಧರ್ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಲಾರಿ ಒಂದು ಬಂದು ಡಿಕ್ಕಿ ಹೊಡೆದಿದೆ. ಲಾರಿ ಹರಿದು ಹೋದ ನಂತರವು ಶಶಿಧರ್ ಎದ್ದು ಕುಳಿತಿದ್ದಾರೆ. ಆದರೆ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶಶಿಧರ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಲಾರಿ ಬೈಕ್ಗೆ ಬಂದು ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಶಿಧರ್ ಗೆ ಮದುವೆಯಾಗಿ ಕೇವಲ 4 ತಿಂಗಳು ಕಳೆದಿತ್ತು. ಈ ರೀತಿಯಲ್ಲಿ ದಾರುಣ ರೀತಿಯಲ್ಲಿ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ದು:ಖ ತಂದಿದೆ. ಈ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
